ನಂಬೋದು ಸ್ವಲ್ಪ ಕಷ್ಟವಾಗಬಹುದು. ಆದ್ರೂ ಇದು ಸತ್ಯ. ಇಲ್ಲೊಬ್ಬ ಮಹಿಳೆಯ ನಾಲಿಗೆಯ ಬೆಲೆ ಸುಮಾರು 9 ಕೋಟಿ ರೂಪಾಯಿ. 9 ಕೋಟಿ ಬೆಲೆ ಬಾಳುವ ಆ ಮಹಿಳೆ ನಾಲಿಗೆಯಲ್ಲಿ ಅಂಥಹದ್ದೇನಿದೆ ಅಂದ್ರಾ?
ಈ ಮಹಿಳೆ ಹೆಸರು ಹೈಲಿ ಕರ್ಟಿಸ್. ಪ್ರಸಿದ್ಧ ಚಾಕಲೇಟ್ ಕಂಪನಿ ಕ್ಯಾಡ್ಬರಿಯಲ್ಲಿ ಈಕೆ ಕೆಲಸ ಮಾಡ್ತಾಳೆ. ಈ ಮಹಿಳೆಗೆ ಕಂಪನಿ ಚಾಕಲೇಟ್ ರುಚಿ ನೋಡುವ ಕೆಲಸ ನೀಡಿದೆ. ಹಾಗಾಗಿ ಚಾಕಲೇಟ್ ರುಚಿ ನೋಡಿ, ಇದು ತಿನ್ನಲು ಯೋಗ್ಯವಾಗಿದೆಯಾ ಇಲ್ಲವಾ ಅಂತಾ ತಿಳಿಸೋದೆ ಈ ಮಹಿಳೆಯ ಕೆಲಸ.
ಹಾಗಾಗಿಯೇ ಕ್ಯಾಡ್ಬರಿ ಕಂಪನಿ ಮಹಿಳೆಯ ನಾಲಿಗೆಗೆ ವಿಮೆ ಮಾಡಿಸಿದೆ. ಸುಮಾರು 9 ಕೋಟಿ ರೂಪಾಯಿಯ ವಿಮೆ ಮಾಡಿಸಿರುವ ಕ್ಯಾಡ್ಬರಿ ಕಂಪನಿ, ನಾಲಿಗೆಯ ರುಚಿ ಕೆಡುವಂತಹ ಯಾವುದೇ ಆಹಾರ ಸೇವನೆ ಮಾಡದಂತೆ ಮಹಿಳೆಗೆ ನಿರ್ಬಂಧ ಹೇರಿದೆ.