ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಕ್ಟೋಬರ್ 9 ರಿಂದ ‘ಬಿಗ್ ಬಾಸ್’ ಸೀಸನ್ 4 ಶುರುವಾಗಲಿದೆ. ಈಗಾಗಲೇ ಶೋ ಕುರಿತಾದ ಟ್ರೇಲರ್ ಭಾರೀ ಸದ್ದು ಮಾಡುತ್ತಿದೆ.
ಕಿರುತೆರೆಯಲ್ಲಿ ಜನಪ್ರಿಯ ಕಾರ್ಯಕ್ರಮವಾಗಿರುವ ‘ಬಿಗ್ ಬಾಸ್’ ಅಕ್ಟೋಬರ್ 9 ರಂದು ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. 10 ರಿಂದ ಎಂದಿನಂತೆ ರಾತ್ರಿ ಕಾರ್ಯಕ್ರಮ ಪ್ರಸಾರವಾಗಲಿದೆ. ಬಹುಭಾಷಾ ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡಲಿದ್ದು, ಕಂಟೆಸ್ಟೆಂಟ್ ಗಳಾಗಿ ಯಾರು ಭಾಗವಹಿಸಲಿದ್ದಾರೆ ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ರಿಯಾಲಿಟಿ ಶೋನಲ್ಲಿ ಸಿನಿಮಾ, ಕಿರುತೆರೆ ಸೇರಿದಂತೆ ವಿವಿಧ ಕ್ಷೇತ್ರಗಳ ಆಯ್ದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
‘ಬಿಗ್ ಬಾಸ್’ ಮೊದಲ ಸೀಸನ್ ನಲ್ಲಿ ವಿಜಯ್ ರಾಘವೇಂದ್ರ, 2 ನೇ ಸೀಸನ್ ನಲ್ಲಿ ಅಕುಲ್ ಬಾಲಾಜಿ, 3 ನೇ ಸೀಸನ್ ನಲ್ಲಿ ಶ್ರುತಿ ವಿಜೇತರಾಗಿದ್ದರು. ಈಗ ಅಕ್ಟೋಬರ್ 9 ರಿಂದ ‘ಬಿಗ್ ಬಾಸ್’ ಸೀಸನ್ 4 ಆರಂಭವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳಾಗಿರುತ್ತಾರೆ. ಯಾರು ವಿಜೇತರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.