ಕೋಜಿಕ್ಕೋಡ್: ಪಶ್ಚಿಮ ಪಾಕಿಸ್ತಾನ, ಬಲೂಚಿಸ್ತಾನ ನಿಮ್ಮ ಬಳಿಯೇ ಇವೇ ಅವನ್ನು ಸಂಭಾಳಿಸಲು ಆಗುತ್ತಿಲ್ಲ. ಕಾಶ್ಮೀರದ ವಿಚಾರವಾಗಿ ಮಾತನಾಡುತ್ತಾ, ಪಾಕ್ ಜನರನ್ನು ಮರುಳು ಮಾಡುತ್ತಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿ.ಜೆ.ಪಿ. ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾಗವಹಿಸಲು ಕೇರಳದ ಕೋಝಿಕ್ಕೋಡ್ ಗೆ ಆಗಮಿಸಿದ್ದ ಅವರು, ಬಹಿರಂಗ ಸಮಾವೇಶದಲ್ಲಿ ಮಾತನಾಡಿದರು. ಏಷ್ಯಾದ ಎಲ್ಲಾ ದೇಶಗಳು ಅಭಿವೃದ್ಧಿಯತ್ತ ಮುನ್ನಡೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಆದರೆ, ನಮ್ಮ ನೆರೆ ರಾಷ್ಟ್ರ ಬೇರೆಯದೇ ಆದ ಹೆಜ್ಜೆ ಇಡುತ್ತಿದೆ ಎಂದು ಟೀಕಿಸಿದ್ದಾರೆ.
ಎರಡೂ ದೇಶಗಳು ಒಂದೇ ಸಮಯಕ್ಕೆ ಸ್ವಾತಂತ್ರ್ಯ ಪಡೆದುಕೊಂಡಿವೆ. ಭಾರತ ಸಾಫ್ಟ್ ವೇರ್ ಇಂಜಿನಿಯರ್ ಗಳನ್ನು ರಫ್ತು ಮಾಡುತ್ತಿದೆ. ನೀವು ಭಯೋತ್ಪಾದಕರನ್ನು ರಫ್ತು ಮಾಡುತ್ತಿದ್ದೀರಿ. ಏನಾಗುತ್ತದೆಯೋ ಆಗಲಿ, ನೋಡೇ ಬಿಡೋಣ. ನಮ್ಮ ಸೈನಿಕರ ತ್ಯಾಗ, ಬಲಿದಾನವಾಗಿದೆ. ಅದಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ. ಲೆಕ್ಕಾ ಚುಕ್ತಾ ಮಾಡುತ್ತೇವೆ ಎಂದು ಪಾಕ್ ವಿರುದ್ಧ ಗುಡುಗಿದ್ದಾರೆ.