ಬೆಂಗಳೂರು: ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮೊದಲೇ ಪ್ಲಾನ್ ಮಾಡಿಕೊಳ್ಳಿ. ಇಲ್ಲದಿದ್ದರೆ, ಸಾಲು ರಜೆಯಿಂದ ತೊಂದರೆ ಅನುಭವಿಸಬೇಕಾದೀತು.
ಅಕ್ಟೋಬರ್ ತಿಂಗಳಲ್ಲಿ 5 ಭಾನುವಾರ ಬರುತ್ತವೆ. 8 ರಂದು 2 ನೇ ಶನಿವಾರ, 9 ರಂದು ಭಾನುವಾರ, 10 ರಂದು ಮಹಾನವಮಿ, 11 ರಂದು ವಿಜಯದಶಮಿ, 12 ರಂದು ಮೊಹರಂ ಕೊನೆ ದಿನ, 29 ರಂದು ನರಕ ಚತುರ್ದಶಿ, 30 ರಂದು ಅಮಾವಾಸ್ಯೆ, 31 ರಂದು ಬಲಿಪಾಡ್ಯಮಿ ರಜೆ ಇರುತ್ತದೆ. ಮಾರನೇ ದಿನ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಜೆ ಇರುತ್ತದೆ.
ಅಕ್ಟೋಬರ್ 2 ರಂದು ಭಾನುವಾರ ಗಾಂಧಿಜಯಂತಿ, 9, 16, 23 ಹಾಗೂ 30 ಭಾನುವಾರ ರಜೆ ಇರುತ್ತದೆ. ಹೀಗೆ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ರಜೆ ಇರುವುದರಿಂದ ನಿಮ್ಮ ವ್ಯವಹಾರಗಳಿಗೆ ತೊಂದರೆಯಾಗದಂತೆ ಪ್ಲಾನ್ ಮಾಡಿಕೊಳ್ಳಿ.