ಕಿರುತೆರೆಯ ಪ್ರಸಿದ್ಧ ಜೋಡಿಗಳಲ್ಲಿ ಗುರ್‌ಮೀತ್ ಚೌಧರಿ- ದೆಬಿನಾ ಬ್ಯಾನರ್ಜಿ ಜೋಡಿ ಕೂಡ ಒಂದು. ಗುರ್‌ಮೀತ್ ಚೌಧರಿ ಬಾಲಿವುಡ್ ಗೂ ಕಾಲಿಟ್ಟಿದ್ದಾನೆ. ದೆಬಿನಾ ಸದ್ಯ ಟಿವಿ ಪ್ರಪಂಚದಲ್ಲಿಯೇ ಕಾರ್ಯ ನಿರ್ವಹಿಸ್ತಿದ್ದಾಳೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಗುರ್‌ಮೀತ್ ಚೌಧರಿ- ದೆಬಿನಾ ಬ್ಯಾನರ್ಜಿ ತಮ್ಮ ಖಾಸಗಿ ಬದುಕನ್ನು ತೆರೆದಿಟ್ಟಿದ್ದಾರೆ. ಬೆಡ್ ರೂಂ ನಲ್ಲಿ ಕಿಸ್ ಕೊಡೋದಿಕ್ಕೆ ಇಷ್ಟ ಪಡ್ತೀರಾ, ಇಲ್ಲ ಹಗ್ ಮಾಡೋದಕ್ಕಾ ಎನ್ನುವ ಪ್ರಶ್ನೆಗೆ ಮುಚ್ಚು ಮರೆಯಿಲ್ಲದೆ ಉತ್ತರ ನೀಡಿದ್ದಾರೆ. ಬೆಡ್ ರೂಂ ನಲ್ಲಿ ಇವೆರಡಕ್ಕೂ ಮಹತ್ವ ನೀಡ್ತೇವೆ ಎಂದಿದ್ದಾರೆ ಈ ಜೋಡಿ.
ಅಷ್ಟೇ ಅಲ್ಲ, ರಾತ್ರಿ ಪೈಜಾಮ ಹಾಕ್ತೀರಾ ಇಲ್ಲ ಬೇರೆ ಡ್ರೆಸ್ ಹಾಕ್ತೀರಾ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ. ಡ್ರೆಸ್, ಮೂಡ್ ಮೇಲೆ ಅವಲಂಬಿಸಿರುತ್ತದೆ. ಇಬ್ಬರಿಗೂ ಸುಸ್ತಾಗಿದ್ರೆ ಪೈಜಾಮ ಧರಿಸ್ತೇವೆ. ರೋಮ್ಯಾಂಟಿಕ್ ಮೂಡ್ ನಲ್ಲಿದ್ದರೆ ಸೆಕ್ಸಿ ಡ್ರೆಸ್ ಧರಿಸ್ತೇವೆ. ಇದು ಆ ಕ್ಷಣವನ್ನು ಮತ್ತಷ್ಟು ರೋಮಾಂಚನಗೊಳಿಸುತ್ತೆ ಎನ್ನುತ್ತಾರೆ ಇವರು.