ಮೆಕ್ಸಿಕೋ: ಮದ್ಯ ಹಾಗೂ ಮುತ್ತಿನ ಮತ್ತಿನಲ್ಲಿ ಮೈಮರೆತ ಯುವತಿಯೊಬ್ಬಳು ತನ್ನ ಮದುವೆ ಮುರಿದು ಬೀಳಲು ಕಾರಣವಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ವಿಪರೀತ ಮದ್ಯ ಸೇವಿಸಿದ್ದ ಯುವತಿ, ಅಮಲಿನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಲಿಪ್ ಲಾಕ್ ಮಾಡಿದ್ದು, ಅದಕ್ಕಾಗಿ ತನ್ನ ಮದುವೆಯೇ ಕ್ಯಾನ್ಸಲ್ ಆಗಲು ಕಾರಣವಾಗಿದ್ದಾಳೆ. ಮದುವೆ ನಿಶ್ಚಯವಾಗಿದ್ದ ಮೆಕ್ಸಿಕೋದ ಯುವತಿ ಎಮ್ಮಾ ಪೇಜ್ ಆಯ್ಲಾ ತನ್ನ ಸ್ನೇಹಿತೆಯೊಂದಿಗೆ ಪಾರ್ಟಿಗೆಂದು ರೆಸಾರ್ಟ್ ಗೆ ಹೋಗಿದ್ದಾಳೆ. ರೆಸಾರ್ಟ್ ನಲ್ಲಿ ಫ್ರೆಂಡ್ಸ್ ಜೊತೆಗೆ ಭರ್ಜರಿ ಪಾರ್ಟಿ ಮಾಡಿ ಕಂಠ ಪೂರ್ತಿ ಮದ್ಯ ಸೇವಿಸಿದ್ದಾಳೆ.
ಅಮಲಿನಲ್ಲಿ ಮೈಮರೆತು ರೆಸಾರ್ಟ್ ಗೆ ಬಂದಿದ್ದ ಅಪರಿಚಿತನೊಂದಿಗೆ ಲಿಪ್ ಲಾಕ್ ಮಾಡಿದ್ದಾಳೆ. ಅದನ್ನು ಅಲ್ಲಿದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಯುವತಿಯ ಮದುವೆ ನಿಶ್ಚಯವಾಗಿದ್ದ ಯುವಕ ಹಾಗೂ ಆತನ ಮನೆಯವರು ಜಾಲತಾಣದಲ್ಲಿ ಇದನ್ನು ನೋಡಿದ್ದಾರೆ. ಮದ್ಯ ಸೇವಿಸಿ ಅಪರಿಚಿತನೊಂದಿಗೆ ಲಿಪ್ ಲಾಕ್ ಮಾಡಿದ ಯುವತಿಯೊಂದಿಗೆ ನಡೆಯಬೇಕಿದ್ದ ಮದುವೆ ರದ್ದುಪಡಿಸಿದ್ದಾರೆ.