ಚೆನ್ನೈ: ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕ ಮಹೇಂದ್ರ ಸಿಂಗ್ ಧೋನಿ, ಚೆನ್ನೈನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ.
ತಮ್ಮ ಜೀವನಾಧಾರಿತ ಚಿತ್ರ ‘ಎಂ.ಎಸ್.ಧೋನಿ: ದಿ ಅನ್ ಟೋಲ್ಡ್ ಸ್ಟೋರಿ’ ಚಿತ್ರದ ಪ್ರಮೋಷನ್ ಗಾಗಿ ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಚಿತ್ರದ ನಾಯಕ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಚೆನ್ನೈಗೆ ಆಗಮಿಸಿದ್ದ ಧೋನಿ ಬಿಡುವಿಲ್ಲದೇ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿದ್ದಾರೆ. ರಜನಿಕಾಂತ್ ಅವರ ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ ಎಂದು ಹೇಳಿದ್ದಾರೆ.
ಚೆನ್ನೈನ ಸತ್ಯಂ ಸಿನಿಮಾಸ್ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಸಿಂಗಂ’ ಖ್ಯಾತಿಯ ನಟ ಸೂರ್ಯ ಅವರ ಪತ್ನಿ, ನಟಿ ಜ್ಯೋತಿಕಾ ಹಾಗೂ ಮಕ್ಕಳಾದ ದೇವ್ ಮತ್ತು ದಿಯಾ ಅವರನ್ನು ಮಾತನಾಡಿಸಿ, ಸೂರ್ಯ ತಮ್ಮ ಮೆಚ್ಚಿನ ನಟರಲ್ಲಿ ಒಬ್ಬರು ಎಂದು ಧೋನಿ ಹೇಳಿದ್ದಾರೆ.