ರಿಲಾಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ದೇಶದ ಮುಂಚೂಣಿ ಮೊಬೈಲ್ ಕಂಪನಿ ಏರ್ಟೆಲ್, ಇಂದು ತನ್ನ ಪ್ರಿ ಪೇಯ್ಡ್ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ.
1495 ರೂಪಾಯಿ ರೀಚಾರ್ಜ್ ಗೆ 90 ದಿನಗಳ ಕಾಲ ಅನಿಯಮಿತ 4 ಜಿ ಡೇಟಾ ಸೌಲಭ್ಯವನ್ನು ಏರ್ಟೆಲ್ ಪ್ರಿ ಪೇಯ್ಡ್ ಬಳಕೆದಾರರಿಗೆ ನೀಡುತ್ತಿದ್ದು, ಹೊಸದಾಗಿ ಸಿಮ್ ಖರೀದಿಸುವವರು 1494 ರೂಪಾಯಿ ಒಮ್ಮೆಗೆ ಪಾವತಿಸಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
ಸದ್ಯ ದೆಹಲಿಯಲ್ಲಿ ಈ ಆಫರ್ ಲಭ್ಯವಿದ್ದು, ಶೀಘ್ರದಲ್ಲೇ ದೇಶದ ಇತರೆ ಏರ್ಟೆಲ್ ಬಳಕೆದಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದೆಂದು ಭಾರ್ತಿ ಏರ್ಟೆಲ್ ನಿರ್ದೇಶಕ ಅಜಯ್ ಪುರಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ಟೆಲಿಕಾಂ ಕಂಪನಿಗಳ ಪೈಪೋಟಿಯಿಂದ ಮೊಬೈಲ್ ಬಳಕೆದಾರರಿಗೆ ಲಾಭವಾಗುತ್ತಿರುವುದಂತೂ ಸತ್ಯ. ಡೇಟಾ ಖಾಲಿಯಾಗುತ್ತದೆಂದು ಅವಶ್ಯಕತೆಯಿದ್ದಾಗಷ್ಟೇ ಆನ್ ಮಾಡುತ್ತಿದ್ದ ಬಳಕೆದಾರರು, ಇನ್ನು ಮುಂದೆ ನಿಶ್ಚಿಂತೆಯಿಂದಾಗಿ ದಿನದ 24 ಗಂಟೆಗಳ ಕಾಲವೂ ಆನ್ ಮಾಡಿಟ್ಟುಕೊಳ್ಳಬಹುದಾಗಿದೆ.