ಪ್ರಧಾನಿ ಮೋದಿಯವರ ಅಭಿಮಾನಿ ಬಳಗ ದೊಡ್ಡದು. ಸಾಮಾಜಿಕ ಜಾಲತಾಣಗಳಲ್ಲೂ ಮೋದಿಯವರನ್ನು ಫಾಲೋ ಮಾಡುವ ಅಸಂಖ್ಯಾತ ಮಂದಿಯಿದ್ದಾರೆ. ಆದರೆ ಈ ಪುಟ್ಟ ಬಾಲಕನ ಮೋದಿಯವರ ಮೇಲಿನ ಅಭಿಮಾನ ಮಾತ್ರ ವಿಭಿನ್ನವಾಗಿದೆ. ಈತ ಮೋದಿಯವರನ್ನು ನಿತ್ಯ ಪೂಜಿಸುತ್ತಾನೆ.
12 ವರ್ಷದ ಕಾರ್ತಿಕ್ ಎಂಬಾತ ಮೋದಿಯವರ ಕಟ್ಟಾ ಅಭಿಮಾನಿ. ಉತ್ತರ ಪ್ರದೇಶದ ಶಹಜಹಾಂಪುರ ನಿವಾಸಿಯಾದ ಕಾರ್ತಿಕ್, ಮನೆಯ ದೇವರ ಕೋಣೆಯಲ್ಲಿ ನರೇಂದ್ರ ಮೋದಿಯವರ ಫೋಟೋವಿದೆ. ಆ ಫೋಟೋಕ್ಕೆ ಕಾರ್ತಿಕ್ ಪ್ರತಿನಿತ್ಯ ಬೆಳಿಗ್ಗೆ ಪೂಜೆ ಸಲ್ಲಿಸುತ್ತಾನೆ. ಮೋದಿಯವರನ್ನು ಪೂಜಿಸದೇ ಈತ ಆಹಾರ ಕೂಡಾ ಸೇವಿಸುವುದಿಲ್ಲ.
ಮೋದಿಯವರಂತ ವ್ಯಕ್ತಿ ಇನ್ನೊಬ್ಬರಿಲ್ಲ. ಅವರೇ ಈ ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಾರೆ ಎಂಬುದು ಕಾರ್ತಿಕ್ ಅಭಿಮತ. ಮೋದಿಯವರನ್ನು ಪೂಜಿಸುವುದಲ್ಲದೇ ಈತ ಮೋದಿಯವರ ಕುರಿತಾದ ಅನೇಕ ಕವನಗಳನ್ನು ಕೂಡ ರಚಿಸಿದ್ದಾನೆ. ಮೋದಿಯವರನ್ನು ಭೇಟಿಯಾಗಿ ಅವರ ಕುರಿತು ರಚಿಸಿದ ಕವನಗಳನ್ನು ಓದಿ ಹೇಳುವ ಬಯಕೆ ಕಾರ್ತಿಕನದ್ದಾಗಿದೆ.