ಈಗಿನ ಟ್ರೆಂಡ್ ಗೆ ತಕ್ಕಂತೆ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಸ್ಯಾಮ್ ಸಂಗ್, ಸೆಪ್ಟಂಬರ್ 26 ರಿಂದ ಭಾರತದ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಪರಿಚಯಿಸಲಿದೆ.
ಈಗಾಗಲೇ ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಬಿಡುಗಡೆಯಾಗಿರುವ ‘ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 9 ಪ್ರೊ’ ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, 32, 490 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ. ಸಿಂಗಲ್ ಸಿಮ್/ ಡ್ಯುಯೆಲ್ ಸಿಮ್, 6 ಇಂಚಿನ ಸೂಪರ್ ಅಮ್ ಲೋಡ್ ಸ್ಕ್ರೀನ್, 32 ಜಿ.ಬಿ. ಇಂಟರ್ನಲ್ ಮೆಮೋರಿ, 4 ಜಿ.ಬಿ ರ್ಯಾಮ್, ಅಕ್ವಾ ಕೋರ್ ಪ್ರೊಸೆಸರ್ ಇದರಲ್ಲಿವೆ.
ಎಸ್.ಡಿ. ಕಾರ್ಡ್ ಮೂಲಕ 256 ಜಿ.ಬಿ. ವರೆಗೆ ಮೆಮೊರಿ ವಿಸ್ತರಣಾ ಸಾಮರ್ಥ್ಯ ಸೇರಿದಂತೆ ಹಲವಾರು ಫೀಚರ್ ಗಳಿವೆ. ಮತ್ತೊಂದು ವಿಶೇಷವೆಂದರೆ ಈ ಫೋನ್ ನಲ್ಲಿ 5000 mAh ಬ್ಯಾಟರಿ ಅಳವಡಿಸಲಾಗಿದೆ.