ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಖರೀದಿ ಕಷ್ಟದ ಕೆಲಸ. ನಿರೀಕ್ಷೆಗಿಂತ ಹೆಚ್ಚು ಬೇಡಿಕೆ ಇರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಷ್ಟು ಸಿಮ್ ನೀಡಲಾಗ್ತಾ ಇಲ್ಲ. ಈ ನಡುವೆ ರಿಲಾಯನ್ಸ್ ತನ್ನ ಹೊಸ ಸಾಧನ Jiofai 4G ಹಾಟ್ ಸ್ಪಾಟ್ ಪ್ರಾರಂಭಿಸಿದೆ. ಭಾರತದ ರಿಲಾಯನ್ಸ್ ಸ್ಟೋರ್ ನಲ್ಲಿ Jiofai 4G ಹಾಟ್ ಸ್ಪಾಟ್ 1999 ರೂಪಾಯಿಗೆ ಸಿಗ್ತಾ ಇದೆ.
ಈ ಡಿವೈಸ್ ನಲ್ಲಿ Oled ಡಿಸ್ ಪ್ಲೇ ಹಾಗೂ 2600 mAh ಬ್ಯಾಟರಿ ಇದೆ. ಈ ಹಿಂದಿನ Jiofai ನಲ್ಲಿ 2300 mAh ಬ್ಯಾಟರಿ ನೀಡಲಾಗಿತ್ತು. ಮನೆಯಲ್ಲಿ ಅನೇಕರು ನೆಟ್ ಬಳಸುತ್ತಿದ್ದರೆ ಈ Jiofai 4G ಬಹಳ ಉಪಯೋಗಕಾರಿ. ಈ Jiofai 4G ನಲ್ಲಿ 10 ಡಿವೈಸ್ ಕನೆಕ್ಟ್ ಮಾಡಿ ನೆಟ್ ಬಳಸಬಹುದಾಗಿದೆ.
ಮೊದಲು ರಿಲಾಯನ್ಸ್ ಮಳಿಗೆಗೆ ಹೋಗಿ Jiofai 4G ಡಿವೈಸ್ ಖರೀದಿ ಮಾಡಿ. ಇದರ ಜೊತೆ ನಿಮಗೊಂದು ಜಿಯೋ ಸಿಮ್ ಸಿಗಲಿದೆ. ಡಿವೈಸ್ ನ ಸಿಮ್ ಸ್ಲಾಟ್ ನಲ್ಲಿ ಸಿಮ್ ಹಾಕಿ. ಇದರ ಜೊತೆಯಲ್ಲಿಯೇ ಡಿವೈಸ್ ನಲ್ಲಿ ಬರೆದಿರುವ SSID ಹಾಗೂ ಪಾಸ್ ವರ್ಡ್ ಬರೆದಿಟ್ಟುಕೊಳ್ಳಿ. ನಂತ್ರ ಡಿವೈಸ್ ಹಿಂದೆ ಬ್ಯಾಟರಿ ಹಾಕಿ, ಕವರ್ ಮುಚ್ಚಿ. ನಂತ್ರ ಡಿವೈಸ್ ಚಾರ್ಜ್ ಮಾಡಿ. ಚಾರ್ಜ್ ಆದ ನಂತ್ರ ಪವರ್ ಬಟನ್ ಒತ್ತಿ. ಆನ್ ಆಗ್ತಿದ್ದಂತೆ ಡಿವೈಸ್ ನ ಲೈಟ್ ಬಂದಾಗುತ್ತದೆ. ನಂತ್ರ ನಿಮ್ಮ ಲ್ಯಾಪ್ ಟಾಪ್, ಮೊಬೈಲ್ ಗೆ ಕನೆಕ್ಟ್ ಮಾಡಿ, ನೆಟ್ ಬಳಸಿ.