ನವದೆಹಲಿ: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಬಡ, ಮಧ್ಯಮ ವರ್ಗದವರಿಗೆ ಗಾಯದ ಮೇಲೆ ಬರೆ ಎಳೆದಂತೆ ತೈಲಕಂಪನಿಗಳಿಂದ ಹೊಸ ತೀರ್ಮಾನವೊಂದು ಹೊರ ಬಿದ್ದಿದೆ.
ತೈಲ ಕಂಪನಿಗಳು ಇನ್ನುಮುಂದೆ ಪ್ರತಿ 15 ದಿನಕ್ಕೊಮ್ಮೆ ಪಡಿತರ ಸೀಮೆಎಣ್ಣೆ ದರವನ್ನು ಏರಿಕೆ ಮಾಡಲಿವೆ. ಪ್ರತಿ 15 ದಿನಕ್ಕೊಮ್ಮೆ ಪಡಿತರ ಸೀಮೆಎಣ್ಣೆ ಲೀಟರ್ ಗೆ 25 ಪೈಸೆಯಷ್ಟು ಏರಿಕೆ ಮಾಡಲಾಗುವುದು. ಕಳೆದ ಜುಲೈನಲ್ಲಿ ತೈಲ ಕಂಪನಿಗಳು, ಪಡಿತರ ಸೀಮೆಎಣ್ಣೆ ದರವನ್ನು ಪ್ರತಿ ತಿಂಗಳಿಗೆ ಒಂದು ಬಾರಿ ಏರಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಆ ತೀರ್ಮಾನವನ್ನು ಬದಲಿಸಲಾಗಿದೆ.
ಇನ್ನು ಮುಂದೆ ಪ್ರತಿ 15 ದಿನಗಳಿಗೊಮ್ಮೆ ಸೀಮೆಎಣ್ಣೆ ಲೀಟರ್ ಗೆ 25 ಪೈಸೆ ಏರಿಕೆಯಾಗಲಿದೆ. ರಿಯಾಯಿತಿ ಸೀಮೆಎಣ್ಣೆ ದರ ಲೀಟರ್ ಗೆ 10.03 ರೂ. ದರ ಇದ್ದು, ಕೋಲ್ಕತಾದಲ್ಲಿ ಜುಲೈನಲ್ಲಿ 16.78 ರೂ. ಬೆಲೆ ನಿಗದಿಯಾಗಿತ್ತು. ಅದಕ್ಕೆ 28 ಪೈಸೆಯಷ್ಟು ದರ ಹೆಚ್ಚಾಗಿದೆ. ಇನ್ನು ಮುಂದೆ 15 ದಿನಗಳಿಗೊಮ್ಮೆ ಸೀಮೆಎಣ್ಣೆ ದರ ಪರಿಷ್ಕರಿಸಲಾಗುವುದು ಎಂದು ಹೇಳಲಾಗಿದೆ.