ಟೀಂ ಇಂಡಿಯಾ ನಾಯಕ ಎಂ.ಎಸ್. ಧೋನಿ ತಮ್ಮ ಬಯೋಪಿಕ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ. ಎಂ.ಎಸ್.ಧೋನಿ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಕೂಲ್ ಕ್ಯಾಪ್ಟನ್ ಸುಮಾರು 20 ನಿಮಿಷಗಳ ಕಾಲ ಮಾತನ್ನೇ ಆಡಿಲ್ಲ. ಸುಮ್ಮನೇ ನಗುತ್ತ ಕುಳಿತಿದ್ದರಂತೆ.
ತಮ್ಮ ಜೀವನಾಧಾರಿತ ಚಿತ್ರ ಅಷ್ಟೊಂದು ಅದ್ಭುತವಾಗಿ ಮೂಡಿ ಬಂದಿರುವುದನ್ನು ನೋಡಿ ಧೋನಿ ಸಖತ್ ಖುಷಿಯಾಗಿದ್ರು. ಸಿನಿಮಾ ಮುಗಿದ ಮೇಲೂ 20 ನಿಮಿಷ ಧೋನಿ ಆ ಗುಂಗಿನಿಂದ ಹೊರಬಂದಿರಲಿಲ್ಲ. ಎಲ್ಲವೂ ಚಮತ್ಕಾರದಂತೆ ಅವರಿಗೆ ಭಾಸವಾಗಿತ್ತು. ಧೋನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಶಾಂತ್ ಸಿಂಗ್ ರಜಪೂತ್ ಅಭಿನಯಕ್ಕೆ ಎಂಎಸ್, ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಈ ಚಿತ್ರ ಸುಶಾಂತ್ ವೃತ್ತಿ ಬದುಕಿನ ಟರ್ನಿಂಗ್ ಪಾಯಿಂಟ್ ಎಂದೇ ಬಿಂಬಿಸಲಾಗುತ್ತಿದೆ. ಕ್ಯಾಪ್ಟನ್ ಧೋನಿಗೆ ಅವರ ಬಯೋಪಿಕ್ ಸಿಕ್ಕಾಪಟ್ಟೆ ಇಷ್ಟವಾಗಿದೆ. ಹಾಗೇ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗುತ್ತಾ? ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗುತ್ತಾ ಅನ್ನೋದು ಸದ್ಯದ ಪ್ರಶ್ನೆ.