ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಬರೋಬ್ಬರಿ 8 ವರ್ಷಗಳ ನಂತರ, ಬಣ್ಣ ಹಚ್ಚುತ್ತಿದ್ದು, ಅವರ 150 ನೇ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದೆ.
ರಾಜಕೀಯ ಸೇರಿದ ನಂತರ, ಸಿನಿಮಾಗಳಿಂದ ದೂರವಾಗಿದ್ದ ಮೆಗಾಸ್ಟಾರ್ ಚಿರಂಜೀವಿ, ಕಿರುತೆರೆಯಲ್ಲಿಯೂ ಹೊಸ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಕಮಾಲ್ ಮಾಡಲಿದ್ದು, ಮನೆ, ಮನೆ ತಲುಪಲಿದ್ದಾರೆ. ನಾಗಾರ್ಜುನ ನಡೆಸಿಕೊಡುತ್ತಿದ್ದ ‘ಕೋಟೀಶ್ವರುಡು’ ಕಾರ್ಯಕ್ರಮಕ್ಕೆ ಇನ್ನು ಮುಂದೆ ಚಿರು ಹೋಸ್ಟ್ ಆಗಲಿದ್ದಾರೆ. ಕಳೆದ 3 ಸೀಸನ್ ಗಳಲ್ಲಿ ನಾಗಾರ್ಜುನ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ಅವರ ಸಲಹೆಯಂತೆ ಈಗ ಚಿರು ಕಾಣಿಸಿಕೊಳ್ಳಲಿದ್ದಾರೆ.
ಅಮಿತಾಬ್ ಬಚ್ಚನ್ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರದಲ್ಲಿ ಪುನೀತ್ ರಾಜ್ ಕುಮಾರ್, ಸೂರ್ಯ, ನಾಗಾರ್ಜುನ ಕೂಡ ಪ್ರಾದೇಶಿಕ ಭಾಷೆಗಳ ‘ಕೋಟ್ಯಾಧಿಪತಿ’ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು.
ಇದೀಗ ಚಿರಂಜೀವಿ 8 ವರ್ಷಗಳ ನಂತರ, ಸಿನಿಮಾ ಹಾಗೂ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದೆ.