ಪತ್ರಕರ್ತ ರಾಜದೇವ್ ರಂಜನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮೊಹಮ್ಮದ್ ಶಹಾಬುದ್ದೀನ್ ಮೂರು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಈ ಮಧ್ಯೆ ಪ್ರಕರಣದ ಮತ್ತೊಬ್ಬ ಆರೋಪಿ ಮೊಹಮ್ಮದ್ ಕೈಫ್ ಹಾಗೂ ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಒಟ್ಟಿಗೆ ಇರುವ ಫೋಟೋ ವಿವಾದಕ್ಕೆ ನಾಂದಿ ಹಾಡಿದೆ.
ತೇಜ್ ಪ್ರತಾಪ್, ಕೈಫ್ ಜೊತೆಗೆ ಇರುವ ಫೋಟೋ ಇದಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಮೊಹಮ್ಮದ್ ಕೈಫ್ ಅಲಿಯಾಸ್ ಬಂಟಿ, ಶಹಾಬುದ್ದೀನ್ ನ ಬಂಟ. ಆತ ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ. ತೇಜ್ ಪ್ರತಾಪ್ ಸದ್ಯ ಬಿಹಾರದ ನಿತೀಶ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಉನ್ನತ ಹುದ್ದೆಯಲ್ಲಿದ್ದುಕೊಂಡು ತೇಜ್ ಪ್ರತಾಪ್ ಹಂತಕನ ಜೊತೆ ಕಾಣಿಸಿಕೊಂಡಿರೋ ಬಗ್ಗೆ ಬಿಜೆಪಿ ಕಿಡಿಕಾರಿದೆ. ಆದ್ರೆ ತೇಜ್ ಪ್ರತಾಪ್ ಯಾದವ್ ಮಾತ್ರ ಆ ಫೋಟೋಗೂ ನನಗೂ ಯಾವುದೇ ಸಂಬಂಧವಿಲ್ಲ, ಇದೆಲ್ಲ ಬಿಜೆಪಿ ಹಾಗೂ ಆರ್ ಎಸ್ ಎಸ್ ಷಡ್ಯಂತ್ರ ಎಂದಿದ್ದಾರೆ. ಉಭಯ ಪಕ್ಷಗಳ ಮುಖಂಡರ ನಡುವಣ ವಾಕ್ಸಮರಕ್ಕೂ ಇದು ವೇದಿಕೆಯಾಗಿದೆ.