ದೇಶದ ರಾಜಧಾನಿ ದೆಹಲಿಯೊಂದೆ ಅಲ್ಲ ರಾಜಸ್ತಾನದಲ್ಲಿಯೂ ಈ ಋತುವಿನಲ್ಲಿ ಕಾಣಿಸಿಕೊಳ್ಳುವ ರೋಗಗಳ ಅಬ್ಬರ ಜೋರಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಿಂದ ಜನರು ನರಳುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದ್ರೆ ರಾಜ್ಯದ ಕೃಷಿ ಹಾಗೂ ಆರೋಗ್ಯ ಸಚಿವರೇ ಹಾಸಿಗೆ ಹಿಡಿದಿದ್ದಾರೆ.
ರಾಜಸ್ತಾನದಲ್ಲಿ ಡೆಂಗ್ಯೂ ಹಾವಳಿಗೆ ಈಗಾಗಲೇ 6 ಮಂದಿ ಸಾವನ್ನಪ್ಪಿದ್ದಾರೆ. ದಿನ ಕಳೆದಂತೆ ರೋಗಿಗಳ ಸಂಖ್ಯೆ ಏರ್ತಾನೆ ಇದೆ. ಆರೋಗ್ಯ ಸಚಿವ ರಾಜೇಂದ್ರ ರಾಥೋಡ್ ಚಿಕನ್ ಗುನ್ಯಾ ಹಾಗೂ ಕೃಷಿ ಮಂತ್ರಿ ಪ್ರಭುಲಾಲ್ ಸೈನಿ ಡೆಂಗ್ಯೂಗೆ ತುತ್ತಾಗಿದ್ದಾರೆ.
ಜೈಪುರದ ಪ್ರಮುಖ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕ್ತಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ವೈದ್ಯರ ಕೊರತೆ ಎದುರಾಗಿದೆ. ಹಾಗೆ ಅವಶ್ಯಕತೆಗೆ ತಕ್ಕಷ್ಟು ಔಷಧಿಗಳು ಸಿಗ್ತಾ ಇಲ್ಲ. ರೋಗಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ರಜೆಯನ್ನು ಸರ್ಕಾರ ರದ್ದು ಮಾಡಿದೆ.