ಬಹುಭಾಷಾ ನಟ ಕಿಚ್ಚ ಸುದೀಪ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ ಸೀಸನ್ 4 ಶೀಘ್ರವೇ ಆರಂಭವಾಗಲಿದ್ದು, ಈಗಾಗಲೇ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಬಿಗ್ ಬಾಸ್’ ರಿಯಾಲಿಟಿ ಶೋ ಹೆಚ್ಚು ವೀಕ್ಷಕರನ್ನು ಸೆಳೆದಿತ್ತು. ಹಿಂದಿನ 3 ಸೀಸನ್ ಗಳಲ್ಲಿ ಹೋಸ್ಟ್ ಆಗಿದ್ದ ಕಿಚ್ಚ ಸುದೀಪ್ 4 ನೇ ಸೀಸನ್ ನಲ್ಲಿಯೂ ಮೋಡಿ ಮಾಡಲಿದ್ದಾರೆ.
ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬುದು ವೀಕ್ಷಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾ, ಕಿರುತೆರೆ ಕಲಾವಿದರು, ವಿವಿಧ ಕ್ಷೇತ್ರಗಳ ಆಯ್ದ ಸ್ಪರ್ಧಿಗಳು ಭಾಗವಹಿಸಲಿದ್ದು, ಲಿಸ್ಟ್ ರೆಡಿಯಾಗುತ್ತಿದೆ.
ಮಾಹಿತಿ ಪ್ರಕಾರ ‘ಬಿಗ್ ಬಾಸ್-4’ರಲ್ಲಿ ನಟಿಯರಾದ ಸುಧಾರಾಣಿ, ತಾರಾ, ರಾಗಿಣಿ, ಅನುಪ್ರಭಾಕರ್, ಪ್ರಿಯಾ ಹಾಸನ್, ನಟರಾದ ಲೂಸ್ ಮಾದ ಯೋಗಿ, ನವೀನ್ ಕೃಷ್ಣ, ಕೋಮಲ್, ‘ತಿಥಿ’ ಚಿತ್ರದ ಗಡ್ಡಪ್ಪ ಪಾತ್ರಧಾರಿ ಚನ್ನೇಗೌಡ ಭಾಗವಹಿಸುವ ನಿರೀಕ್ಷೆ ಇದೆಯಾದರೂ, ಅಂತಿಮವಾಗಿಲ್ಲ. ಸ್ಪರ್ಧಿಗಳ ಕುರಿತಾದ ಗುಟ್ಟನ್ನು ಎಂದಿನಂತೆಯೇ ಕಾಯ್ದುಕೊಳ್ಳಲಾಗಿದೆ.