Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಭಾರತದಲ್ಲಿದ್ದಾರೆ 12,000 ಕ್ಕೂ ಅಧಿಕ ವಿಚ್ಛೇದಿತ ಮಕ್ಕಳು!

$
0
0
ಭಾರತದಲ್ಲಿದ್ದಾರೆ 12,000 ಕ್ಕೂ ಅಧಿಕ ವಿಚ್ಛೇದಿತ ಮಕ್ಕಳು!

ಬಾಲ್ಯವಿವಾಹವನ್ನು ತೊಡೆದು ಹಾಕಲು ಸರ್ಕಾರ ಶತಪ್ರಯತ್ನ ಮಾಡ್ತಾ ಇದೆ. ಆದ್ರೆ ಬಾಲ್ಯವಿವಾಹಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಅಂದ್ರೆ 2011ರ ಜನಗಣತಿ ದಾಖಲೆಯ ಪ್ರಕಾರ ಭಾರತದಲ್ಲಿ 12,105 ಮಕ್ಕಳು ವಿವಾಹ ವಿಚ್ಛೇದಿತರು.

ಎಲ್ಲರೂ 10-14 ವರ್ಷ ವಯಸ್ಸಿನವರು. ಇವರಲ್ಲಿ ಶೇ.53.67 ರಷ್ಟು ಅಂದ್ರೆ 6497 ಹೆಣ್ಣುಮಕ್ಕಳಿದ್ದಾರೆ. ಬಾಲ್ಯವಿವಾಹವೇ ಕಾನೂನು ಬಾಹಿರವಾಗಿರೋದ್ರಿಂದ ವಿಚ್ಛೇದಿತ ಪುಟ್ಟ ಮಕ್ಕಳನ್ನು ವರ್ಗೀಕರಿಸಲು ಭಾರತದ ಜನಗಣತಿ ಆಯುಕ್ತರು ವಿಫಲರಾಗಿದ್ದಾರೆ. ಈ ಅಂಕಿ-ಅಂಶಗಳನ್ನು ನೋಡ್ತಾ ಇದ್ರೆ ಇವತ್ತಿಗೂ ಬಾಲ್ಯ ವಿವಾಹ ಸರ್ವೇಸಾಮಾನ್ಯವಾಗಿದೆ ಅನ್ನೋದಂತೂ ಖಚಿತ.

ಬಾಲ್ಯ ವಿವಾಹದ ಬಳಿಕ ವಿಚ್ಛೇದನ ಪಡೆಯುವವರ ಸಂಖ್ಯೆ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚಾಗಿದೆ. ಇಲ್ಲಿ 1984 ಮಕ್ಕಳು ವಿಚ್ಛೇದನ ಪಡೆದಿದ್ದಾರೆ. ಉತ್ತರ ಪ್ರದೇಶದಲ್ಲಿ 1875, ಗುಜರಾತ್ ನಲ್ಲಿ 1638, ಪಶ್ಚಿಮ ಬಂಗಾಳದಲ್ಲಿ 1236, ಬಿಹಾರದಲ್ಲಿ 801 ವಿಚ್ಛೇದಿತ ಮಕ್ಕಳಿದ್ದಾರೆ. ಬಾಲ್ಯ ವಿವಾಹದ ತವರು ಎಂದೇ ಕರೆಯಲಾಗುವ ರಾಜಸ್ತಾನದಲ್ಲಿ ಅತ್ಯಂತ ಕಡಿಮೆ ಅಂದ್ರೆ 366 ಬಾಲ್ಯ ವಿವಾಹ ವಿಚ್ಛೇದನ ಪ್ರಕರಣಗಳು ನಡೆದಿವೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>