ರಿಲಾಯನ್ಸ್ ಜಿಯೋ ಭರ್ಜರಿ ಆಫರ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಇದಕ್ಕೆ ಸ್ಪರ್ಧೆಯೊಡ್ಡಲು ಇತರೆ ಟೆಲಿಕಾಂ ಕಂಪನಿಗಳೂ ಸಹ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಘೋಷಿಸುತ್ತಿವೆ. ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳಲ್ಲೊಂದಾದ ಏರ್ಟೆಲ್ ಇದೀಗ ಪ್ರೀ ಪೇಯ್ಡ್ ಬಳಕೆದಾರರಿಗೆ 5 ಜಿಬಿ ಉಚಿತ ಡೇಟಾ ನೀಡಲು ಮುಂದಾಗಿದೆ.
ಇದನ್ನು ರಾತ್ರಿ 12 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಬಳಸಬಹುದಾಗಿದ್ದು, ಈ ಕೊಡುಗೆ ಸೆಪ್ಟೆಂಬರ್ 30 ರವರೆಗೆ ಜಾರಿಯಲ್ಲಿರುತ್ತದೆ. ಗ್ರಾಹಕರು ಈಗಾಗಲೇ ಹೊಂದಿರುವ 2 ಜಿ, 3 ಜಿ ಅಥವಾ 4 ಜಿ ವೇಗಕ್ಕೆ ಅನುಗುಣವಾಗಿ 5 ಜಿಬಿ ಡೇಟಾ ದೊರೆಯಲಿದ್ದು, 28 ದಿನಗಳೊಳಗಾಗಿ ಇದನ್ನು ಬಳಸಬೇಕಾಗುತ್ತದೆ.
ಈ ಕೊಡುಗೆ ಪಡೆಯಲು ಮೊದಲು ಗೆ ಲಾಗಿನ್ ಆಗಿ ಮೈ ಏರ್ಟೆಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಮೈ ಏರ್ಟೆಲ್ ನ Jackpot journey ಪುಟದಲ್ಲಿ ಈ ಕೊಡುಗೆಯನ್ನು ಕ್ಲಿಕ್ ಮಾಡುವ ಮೂಲಕ ಉಚಿತ 5 ಜಿಬಿ ಡೇಟಾವನ್ನು ಪ್ರಿ ಪೇಯ್ಡ್ ಗ್ರಾಹಕರು ಪಡೆಯಬಹುದಾಗಿದೆ.