ಬೆಂಗಳೂರು: ಕಾವೇರಿ ವಿಚಾರವಾಗಿ ಬೆಂಗಳೂರಿನಲ್ಲಿ ಗಲಭೆ ನಡೆದು, ಪೊಲೀಸ್ ಗುಂಡಿಗೆ ಕಿಚ್ಚ ಸುದೀಪ್ ಅಭಿಮಾನಿ ಉಮೇಶ್ ಬಲಿಯಾಗಿದ್ದಾರೆ. ಈ ಸುದ್ದಿ ತಿಳಿದ ಸುದೀಪ್, ಅವರ ಕುಟುಂಬಕ್ಕೆ ನೆರವಾಗಿದ್ದಾರೆ.
ಕೆಲಸ ಮುಗಿಸಿ ಉಮೇಶ್ ಮನೆಗೆ ತೆರಳುವ ಸಂದರ್ಭದಲ್ಲಿ, ಗಲಭೆ ನಿಯಂತ್ರಿಸಲು ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾಗಿದ್ದರು. ಸಂಕಷ್ಟದಲ್ಲಿರುವ ಅವರ ಕುಟುಂಬದವರಿಗೆ ಸರ್ಕಾರ, ಶಾಸಕ ಜಮೀರ್ ಅಹಮ್ಮದ್, ‘ನಾಗರಹಾವು’ ಸಿನಿಮಾ ತಂಡ, ಒಕ್ಕಲಿಗರ ಸಂಘ ಮೊದಲಾದವರು ನೆರವು ನೀಡಿದ್ದಾರೆ. ಉಮೇಶ್ ತಮ್ಮ ಅಭಿಮಾನಿ ಎಂಬುದನ್ನು ತಿಳಿದ ಕಿಚ್ಚ ಸುದೀಪ್ 1 ಲಕ್ಷ ರೂ.ಗಳನ್ನು ನೀಡಿದ್ದಾರೆ.
ಅಭಿಮಾನಿಗಳು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೆರವು ನೀಡುವ ಸುದೀಪ್, ಎಲ್ಲಿಯೂ ಅದನ್ನು ಹೇಳಿಕೊಳ್ಳುವುದಿಲ್ಲ. ಅದೇ ರೀತಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ರಾಮನಗರ ಜಿಲ್ಲೆಯ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ ಎನ್ನಲಾಗಿದೆ.