ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಸಂತೋಷ್ ಬಂಧಿತ ಆರೋಪಿ. ಈತ ಇದೇ ವಿಶ್ವವಿದ್ಯಾಲಯದ ಎಂ.ಎಸ್.ಸಿ. ವಿದ್ಯಾರ್ಥಿಯಾಗಿದ್ದಾನೆ. ಈತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಯಾರಿಗೂ ಗೊತ್ತಾಗದಂತೆ ಮೊಬೈಲ್ ಇರಿಸಿ, ಚಿತ್ರೀಕರಣ ಮಾಡುತ್ತಿದ್ದ. ಆಗಸ್ಟ್ 24 ರಂದು ವಿದ್ಯಾರ್ಥಿನಿಯೊಬ್ಬರು ಅನುಮಾನದಿಂದ ಶೌಚಾಲಯದ ಮೇಲ್ಭಾಗದಲ್ಲಿ ನೋಡಿದಾಗ, ಮೊಬೈಲ್, ಪವರ್ ಬ್ಯಾಂಕ್ ಕಂಡು ಬಂದಿದ್ದವು.
ಇದೇ ಮೊಬೈಲ್ ನಿಂದ 2 ವಿಡಿಯೋ ಕ್ಲಿಪ್ಪಿಂಗ್ ಗಳು ಸೆಂಡ್ ಆಗಿದ್ದು, ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ಆರೋಪಿ ಸಂತೋಷ್ ನನ್ನು ಬಂಧಿಸಿದ್ದಾರೆ.