ಕ್ಯಾಲಿಫೋರ್ನಿಯಾದ 20 ವರ್ಷದ ಹುಡುಗಿಗೆ ಲಿಫ್ಟ್ ಕೇಳಿದ್ದೆ ದುಬಾರಿಯಾಗಿ ಪರಿಣಮಿಸಿದೆ. ಅಮೆರಿಕಾದ ಹುಡುಗಿ ಕಾಲಿನ್, ಸ್ಟೇನ್ ದಂಪತಿ ಬಳಿ ಲಿಫ್ಟ್ ಕೇಳಿದ್ದಾಳೆ. ಆದ್ರೆ ಲಿಫ್ಟ್ ನೀಡುವ ಹೆಸರಲ್ಲಿ ಆಕೆಯನ್ನು ಬಂಧಿಯನ್ನಾಗಿ ಮಾಡಿದ್ದಾರೆ. ಶವಪೆಟ್ಟಿಗೆಯಲ್ಲಿ ಸತತ 7 ವರ್ಷಗಳವರೆಗೆ ಕೂಡಿ ಹಾಕಿದ್ದಾರೆ.
ಕ್ಯಾಮೆರಾನ್ ಮತ್ತು ಜಾನಿಸ್ ಹೂಕರ್ ಹುಡುಗಿಯನ್ನು ಶವಪೆಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದಾರೆ. ಹಿಂಸೆ ನೀಡುವ ವೇಳೆ ಅಥವಾ ಅತ್ಯಾಚಾರವೆಸಗಲು ಮಾತ್ರ ಶವಪೆಟ್ಟಿಗೆಯ ಮುಚ್ಚಳ ತೆಗೆಯಲಾಗುತ್ತಿತ್ತಂತೆ. 1977-1984ರವರೆಗೆ ಆಕೆಗೆ ಈ ಶಿಕ್ಷೆ ನೀಡಲಾಗಿದೆ. ಆದ್ರೆ ಕ್ಯಾಮೆರಾನ್ ಪತ್ನಿಯ ಸಹಾಯದಿಂದಲೇ ಕಾಲಿನ್ ತಪ್ಪಿಸಿಕೊಂಡು ಬಂದಿದ್ದಾಳೆ.
ಕಾರ್ ನಲ್ಲಿ ಬರ್ತಿದ್ದ ದಂಪತಿ ಬಳಿ ಕಾಲಿನ್ ಲಿಫ್ಟ್ ಕೇಳಿದ್ದಾಳೆ. ಕಾರ್ ಹತ್ತಿಸಿಕೊಂಡ ದಂಪತಿ ಸ್ವಲ್ಪ ದೂರ ಹೋದ ಬಳಿಕ ಹುಡುಗಿಗೆ ಹೆದರಿಸಿ ಕೈ, ಕಾಲು ಕಟ್ಟಿದ್ದಾರೆ. ಬಾಯಿಗೆ ಬಟ್ಟೆ ಕಟ್ಟಿದ್ದಾರೆ. ಕ್ಯಾಲಿಫೋರ್ನಿಯಾದ ರೆಡ್ ಬ್ಲಫ್ ಬಳಿ ಇರುವ ಮನೆಗೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಮಂಚದ ಕೆಳಗಿರುವ ಶವದ ಪೆಟ್ಟಿಗೆಯಲ್ಲಿ ಆಕೆಯನ್ನು ಇಟ್ಟಿದ್ದಾರೆ. 1984ರಲ್ಲಿ ಮನೆಯಿಂದ ಓಡಿ ಬಂದ ಕಾಲಿನ್ ಪೊಲೀಸರಿಗೆ ದೂರು ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಕೋರ್ಟ್ ಕ್ಯಾಮೆರಾನ್ ಗೆ 104 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಈಗ ಈ ಹಿಂದಿನ ಕಥೆ ಚಲನಚಿತ್ರವಾಗಿದೆ. ‘ಎ ಗರ್ಲ್ ಇನ್ ದಿ ಬಾಕ್ಸ್’ ಹೆಸರಿನಲ್ಲಿ ಚಿತ್ರ ಮಾಡಲಾಗಿದೆ. ಚಿತ್ರದ ಪ್ರೀಮಿಯರ್ ಶೋ ಕೂಡ ನಡೆದಿದೆ.