ಫುಕೆಟ್ ನಲ್ಲಿ ನಡೆದ ಸ್ನೇಕ್ ಷೋ ಒಂದರಲ್ಲಿ ಆಟವಾಡಿಸುತ್ತಿದ್ದವನ ಕೈನಿಂದ ತಪ್ಪಿಸಿಕೊಂಡ ವಿಷಪೂರಿತ ನಾಗರ ಹಾವೊಂದು ಪ್ರೇಕ್ಷಕರತ್ತ ಸಾಗಿದ್ದು, ತಕ್ಷಣ ಅದನ್ನು ಹಿಡಿಯುವ ಮೂಲಕ ಅನಾಹುತವೊಂದು ತಪ್ಪಿದೆ.
ನಾಗರಹಾವಿನ ಜೊತೆ ಆಟವಾಡುತ್ತಾ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿದ್ದ ವ್ಯಕ್ತಿ ಅದಕ್ಕೆಮುತ್ತು ನೀಡಿದ್ದಾನೆ. ಬಳಿಕ ಅದರ ಬಾಲವನ್ನು ಕೈಯ್ಯಲ್ಲಿ ಹಿಡಿದಿದ್ದ ವೇಳೆ ತಪ್ಪಿಸಿಕೊಂಡ ಅದು, ಪ್ರೇಕ್ಷಕರು ಕುಳಿತಿದ್ದ ಕಡೆ ಹೋಗಿದೆ.
ಇದರಿಂದ ಭಯಭೀತರಾದ ಪ್ರೇಕ್ಷಕರು ಕೂಗಿಕೊಂಡಿದ್ದು, ಮಕ್ಕಳು ಅಳಲಾರಂಭಿಸಿವೆ. ತಕ್ಷಣವೇ ಅದನ್ನು ಹಿಡಿದು ಪೆಟ್ಟಿಗೆಯೊಳಗೆ ಹಾಕಿದ ಬಳಿಕವೇ ಅಲ್ಲಿದ್ದವರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.