ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು, ಆಕಾಶವಾಣಿ ‘ಮನ್ ಕಿ ಬಾತ್’ ಮೂಲಕ, ದೇಶದ ಜನರ ಗಮನ ಸೆಳೆದಿರುವುದು ನಿಮಗೆ ಗೊತ್ತೇ ಇದೆ. ಭಾನುವಾರ ತಮ್ಮ 20ನೇ ‘ಮನ್ ಕಿ ಬಾತ್’ನಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಮೋದಿ, ಮಾನ್ಸೂನ್ ವಿಳಂಬದಿಂದಾಗಿ ಆತಂಕ ಶುರುವಾಗಿದೆ ಎಂದು ಹೇಳಿದ್ದಾರೆ. ಜೂನ್ 5 ರಂದು ಪರಿಸರ ದಿನಾಚರಣೆ ನಡೆಯಲಿದೆ. ನಾವೆಲ್ಲರೂ ಸದಾಕಾಲ ಗಿಡ, ಮರಗಳ ಸಂರಕ್ಷಣೆ ಬಗ್ಗೆ ಒತ್ತು ನೀಡಬೇಕು. ನೀರನ್ನು ಉಳಿಸುವ ಬಗ್ಗೆ ಜಾಗೃತರಾಗಬೇಕು. ನೀರು ರೈತರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಎಲ್ಲರಿಗೂ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
ಒಂದೂ ಹನಿ ನೀರು ಪೋಲಾಗದಂತೆ ನೋಡಿಕೊಳ್ಳಬೇಕು. ಮಾಧ್ಯಮಗಳು ಪರಿಸರ, ನೀರಿನ ಸಂರಕ್ಷಣೆ ಬಗ್ಗೆ ಮಾರ್ಗದರ್ಶನ ನೀಡಬೇಕಿದೆ ಎಂದ ನರೇಂದ್ರ ಮೋದಿಯವರು, ನೀರು, ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡುವುದು ಎಲ್ಲರ ಹೊಣೆ ಎಂದು ಹೇಳಿದ್ದಾರೆ.