ದುಬೈ: ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 22 ಫ್ಲಾಟ್ ಗಳನ್ನು ಭಾರತೀಯರೊಬ್ಬರು ಖರೀದಿಸಿದ್ದಾರೆ.
ಭಾರತೀಯ ಮೂಲದ ಉದ್ಯಮಿಯಾಗಿರುವ ವಿ. ನೆರಿಯಾಪರಂಬಿಲ್ ವಿಶ್ವದ ಅತ್ಯಂತ ಎತ್ತರದ ಕಟ್ಟಡದಲ್ಲಿ 22 ಫ್ಲಾಟ್ ಹೊಂದುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಮಾತ್ರವಲ್ಲ, ಈ ಕಟ್ಟಡದಲ್ಲಿರುವ ಇನ್ನೂ ಹಲವಾರು ಫ್ಲಾಟ್ ಗಳನ್ನು ಖರೀದಿಸಲು ಅವರು ಆಸಕ್ತಿ ಹೊಂದಿದ್ದಾರೆ. ಕೇರಳದವರಾದ ನೆರಿಯಾಪರಂಬಿಲ್ ಮೆಕ್ಯಾನಿಕ್ ಆಗಿ ವೃತ್ತಿಯನ್ನು ಆರಂಭಿಸಿದ್ದು, ಈಗ ಉದ್ಯಮಿಯಾಗಿದ್ದಾರೆ.
ವಿಶ್ವದ ಅತ್ಯಂತ ಎತ್ತರದ ಕಟ್ಟಡದಲ್ಲಿ 900 ಫ್ಲಾಟ್ ಗಳಿದ್ದು, ಇಲ್ಲಿ ಮನೆ ಹೊಂದದಿರುವ ಬಗ್ಗೆ ಸಂಬಂಧಿಕರೊಬ್ಬರು ಹೇಳಿದ ಕೊಂಕು ಮಾತಿನಿಂದ ಅವರು, ಮನೆ ಹೊಂದುವ ಕನಸು ಕಂಡಿದ್ದರು. ಅದರಂತೆ ಅವರೀಗ 22 ಫ್ಲಾಟ್ ಖರೀದಿ ಮಾಡಿದ್ದು, ಅವುಗಳಲ್ಲಿ 5 ನ್ನು ಬಾಡಿಗೆಗೆ ಕೊಟ್ಟಿದ್ದಾರೆ. 6 ವರ್ಷಗಳಿಂದ ಇದೇ ಕಟ್ಟಡದಲ್ಲಿ ವಾಸವಾಗಿದ್ದಾರೆ.