ಆಂಧ್ರಪ್ರದೇಶ ವಿಶಾಖಪಟ್ಟಣಂನ ಲಡ್ಡು ತಯಾರಿಸುವ ಕಂಪನಿಯೊಂದು 29.5 ಟನ್ ಲಾಡನ್ನು ತಯಾರಿಸ್ತಿದೆ. ಇದು ವಿಶ್ವದ ಅತಿ ದೊಡ್ಡ ಲಡ್ಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯದಲ್ಲಿಯೇ ಈ ಲಡ್ಡು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರಲಿದೆ.
ಈ ಲಾಡಿನ ತೂಕ 29.5 ಟನ್ ಇದ್ದು, ಇದನ್ನು 79 ಅಡಿ ಗಣೇಶನಿಗೆ ಅರ್ಪಿಸಲಾಗುವುದೆಂದು ಕಂಪನಿ ಹೇಳಿದೆ. ಲಡ್ಡು ತಯಾರಿಸಲು ಈವರೆಗೆ 50 ಲಕ್ಷ ರೂಪಾಯಿ ಖರ್ಚಾಗಿದೆಯಂತೆ. 20 ಮಂದಿ ಈ ಲಡ್ಡನ್ನು ಸಿದ್ಧಪಡಿಸ್ತಿದ್ದಾರೆ. ಶೇಕಡಾ 45ರಷ್ಟು ಸಕ್ಕರೆ, ಶೇಕಡಾ 23ರಷ್ಟು ಕಡಲೆ ಹಿಟ್ಟು ಶೇಕಡಾ 27ರಷ್ಟು ತುಪ್ಪ ಹಾಗೂ 5ರಷ್ಟು ಡ್ರೈ ಫ್ರುಟ್ಸ್ ಬಳಸಿ ಲಾಡನ್ನು ತಯಾರಿಸಲಾಗ್ತಾ ಇದೆ. ಇದನ್ನು ತಯಾರಿಸಲು ಸುಮಾರು 20 ಗಂಟೆಗಳ ಸಮಯ ಹಿಡಿಯಲಿದೆ.