ಬುಡಕಟ್ಟು ಜನಾಂಗಕ್ಕೆ ಸೇರಿದ 16 ವರ್ಷದ ಬಾಲೆಯ ಕನಸು ನನಸಾಗಿದೆ. ಬ್ರಿಟನ್ ನ ಆಕ್ಸ್ ಫರ್ಡ್ ಸ್ಕೂಲ್ ನಲ್ಲಿ ಇಂಗ್ಲಿಷ್ ಕಲಿಯಲು ಆಕೆ ಸಜ್ಜಾಗಿದ್ದಾಳೆ.
ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಜನ್ವಾರ್ ಗ್ರಾಮದ ಬಾಲಕಿ ಆಶಾ ಗೊಂಡ್ ಗೆ ಆಕ್ಸ್ ಫರ್ಡ್ ನಲ್ಲಿ ಓದುವ ಚಾನ್ಸ್ ಸಿಕ್ಕಿದೆ. ಇಂಗ್ಲಿಷ್ ಭಾಷೆ ಆಶಾಗೆ ಪರಿಚಿತವಾಗಿದ್ದೇ ಇತ್ತೀಚೆಗೆ. ಜರ್ಮನ್ ಮಹಿಳೆ ಅಲ್ರಿಕ್ ರೀನ್ಹಾರ್ಡ್ ಇಲ್ಲಿನ ಬುಡಕಟ್ಟು ಪ್ರದೇಶದ ಮಕ್ಕಳಿಗೆ ಇಂಗ್ಲಿಷ್ ಮತ್ತು ಸ್ಕೇಟಿಂಗ್ ಕಲಿಸಿಕೊಡ್ತಿದ್ದಾರೆ.
ಆಶಾಗೆ ಇಂಗ್ಲಿಷ್ ಬಗ್ಗೆ ಅಪಾರ ಒಲವಿದೆ. ಇದೀಗ ಬ್ರಿಟನ್ ನಲ್ಲಿ ಕಲಿಯುವ ಚಾನ್ಸ್ ಸಿಕ್ಕಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸ ಆಶಾಗಿದೆ. 10ನೇ ತರಗತಿ ಮುಗಿಸಿರುವ ಆಶಾಗೆ ಇಂಗ್ಲಿಷ್ ನಲ್ಲಿ ಬಹಳ ಆಸಕ್ತಿಯಿರುವುದನ್ನು ಗಮನಿಸಿದ ನಾನು ಅವಳನ್ನು ಯುಕೆಗೆ ಕರೆದೊಯ್ಯುವುದಾಗಿ ಮಾತು ಕೊಟ್ಟಿದೆ. ಅವಳನ್ನು ವಿದೇಶಕ್ಕೆ ಕಳುಹಿಸುವಂತೆ ತಂದೆ ಧರ್ಮರಾಜ್ ಮತ್ತು ತಾಯಿ ಕಮಲಾರನ್ನು ಒಪ್ಪಿಸಲು ನನಗೆ 8 ತಿಂಗಳು ಬೇಕಾಯ್ತು. ಅವರದ್ದು ಅಪ್ಪಟ ಕೃಷಿ ಕುಟುಂಬ. ಈ ಹಳ್ಳಿಯಲ್ಲಿ 18 ವರ್ಷವಾದ ಕೂಡಲೇ ಹೆಣ್ಣುಮಕ್ಕಳಿಗೆ ಮದುವೆ ಮಾಡಿಬಿಡುತ್ತಾರೆ. ವಿದೇಶದಲ್ಲಿ ಇಂಗ್ಲಿಷ್ ಕಲಿಕೆಯ ಮಹತ್ವ ಅವರಿಗೆ ತಿಳಿಯದಷ್ಟು ಮುಗ್ಧರು ಎನ್ನುತ್ತಾರೆ ಅಲ್ರಿಕ್ ರೀನ್ಹಾಡ್. ಆಶಾಳ ಶಿಕ್ಷಕರ ಮನವಿ ಮೇರೆಗೆ ಪೋಷಕರು ಅವಳನ್ನು ಬ್ರಿಟನ್ ಗೆ ಕಳಿಸಲು ಒಪ್ಪಿದ್ದಾರಂತೆ.