ಹೌದು, ಭಾರತದಲ್ಲಿ ಕೇವಲ ಶೇ.24ರಷ್ಟು ಮಹಿಳೆಯರು ಮಾತ್ರ ಫೇಸ್ ಬುಕ್ ಬಳಸ್ತಿದ್ದಾರೆ. ಕಳೆದ ವರ್ಷ ಫೇಸ್ ಬುಕ್, ಭಾರತದಲ್ಲಿ 125 ಮಿಲಿಯನ್ ಬಳಕೆದಾರರನ್ನು ಸಂಪಾದಿಸಿತ್ತು. ಇದೀಗ ಭಾರತದಲ್ಲಿ ಫೇಸ್ ಬುಕ್ ಬಳಸುತ್ತಿರುವವರಲ್ಲಿ ಶೇ.76ರಷ್ಟು ಪುರುಷರಾದ್ರೆ, ಶೇ.24ರಷ್ಟು ಮಾತ್ರ ಮಹಿಳೆಯರಿದ್ದಾರೆ.
APAC 2016 ರ ಸಮೀಕ್ಷೆಯ ಪ್ರಕಾರ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆಯಲ್ಲಿ ಶೇ.23 ರಷ್ಟು ಹೆಚ್ಚಳವಾಗಿದೆ. IAMAI ಮಾರ್ಚ್ 2016 ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಇಂಟರ್ನೆಟ್ ಬಳಸುತ್ತಿರುವ ಮಹಿಳೆಯರ ಸಂಖ್ಯೆ ಶೇ.35ರಷ್ಟಿದೆ. ಪುರುಷರ ಸಂಖ್ಯೆ ಶೇ.65 ರಷ್ಟಾಗಿದೆ.
ಕೈಗಾರಿಕಾ ಕ್ರಾಂತಿ, ಶಿಕ್ಷಣ ಕ್ರಾಂತಿಯಲ್ಲಿ ಹಿಂದೆ ಬಿದ್ದಿರುವ ಮಹಿಳೆಯರು ಈಗ ಡಿಜಿಟಲ್ ಕ್ರಾಂತಿಯಲ್ಲೂ ಮುಂದೆ ಬಂದಿಲ್ಲ ಅನ್ನೋದು ಸಾಮಾಜಿಕ ಸಂಶೋಧನಾ ಕೇಂದ್ರದ ನಿರ್ದೇಶಕಿ ರಂಜನಾ ಕುಮಾರಿ ಅವರ ಅಭಿಪ್ರಾಯ. ಇದಕ್ಕೆ ಕಾರಣ ಲಿಂಗ ತಾರತಮ್ಯ, ಮನೆಯಲ್ಲಿ ಮೊಬೈಲ್ ಕೊಡಿಸೋ ವಿಚಾರ ಬಂದ್ರೆ ಸಾಕು ಮೊದಲು ಸಿಗೋದು ಮಗನಿಗೆ. ಇಂಟರ್ನೆಟ್ ಬಳಸದಂತೆ ಪೋಷಕರು ಹೆಣ್ಣುಮಕ್ಕಳನ್ನು ಅಧೀರಗೊಳಿಸುತ್ತಾರೆ ಅನ್ನೋದು ರಂಜನಾರ ಆರೋಪ.
ಗುಜರಾತ್ ನ ಬಸೌಲಿ ಗ್ರಾಮದಲ್ಲಿ ಮಹಿಳೆಯರು ಮೊಬೈಲ್ ಬಳಸದಂತೆ ನಿಷೇಧ ಹೇರಿದ್ದನ್ನು ಕೂಡ ಅವರು ಸ್ಮರಿಸಿದ್ದಾರೆ. 2020 ರ ವೇಳೆಗೆ ಭಾರತದಲ್ಲಿ ಇಂಟರ್ನೆಟ್ ಬಳಸುವ ಮಹಿಳೆಯರ ಪ್ರಮಾಣ ಶೇ.40ರಷ್ಟಾಗುವ ನಿರೀಕ್ಷೆ ಇದೆ.