ರಷ್ಯಾದಲ್ಲಿ ಅಪಘಾತಗಳು ಸಂಭವಿಸುವುದು ಹೆಚ್ಚು. ಇಂತಹ ಅಪಘಾತಗಳನ್ನು ತಪ್ಪಿಸಲು ಹೊಸ ಉಪಾಯ ಹುಡುಕಲಾಗಿದೆ.
ಅಪಘಾತವನ್ನು ತಡೆಗಟ್ಟುವುದಕ್ಕೋಸ್ಕರ ಟಾಪ್ ಲೆಸ್ ಮಾಡೆಲ್ ಗಳನ್ನು ರಸ್ತೆಯಂಚಲ್ಲಿ ಸೈನ್ ಬೋರ್ಡ್ ಹಿಡಿದು ನಿಲ್ಲಿಸಲಾಗಿದೆ. ಈ ಸೈನ್ ಬೋರ್ಡ್ ಗಳಲ್ಲಿ ರೋಡ್ ಸೇಫ್ಟಿ ರೂಲ್ಸ್ ಬಗೆಗಿನ ಮಾಹಿತಿ ಇರುತ್ತದೆ. ಇಂತಹ ಬೋರ್ಡ್ ಗಳನ್ನು ಹಿಡಿದ ಮಾಡೆಲ್ ಗಳು ಹೆಚ್ಚಿನ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ನಿಂತಿದ್ದಾರೆ.
ಟಾಪ್ ಲೆಸ್ ರೂಪದರ್ಶಿಗಳನ್ನು ನೋಡಿದಾಕ್ಷಣ ವಾಹನ ಸವಾರರು ತಮ್ಮ ವಾಹನದ ವೇಗವನ್ನು ಕಡಿಮೆಗೊಳಿಸುತ್ತಾರೆ. ಇದರಿಂದ ಅಪಘಾತಗಳು ತಡೆಗಟ್ಟಲು ಸಾಧ್ಯ ಎಂದು ಈ ವಿಧಾನಕ್ಕೆ ಮೊರೆ ಹೋಗಲಾಗಿದೆ. ಒಟ್ಟಿನಲ್ಲಿ ರಷ್ಯಾದ ಹೊಸ ಬಗೆಯ ಅಪಘಾತ ನಿರ್ವಹಣೆಯ ವಿಧಾನಕ್ಕೆ ವಾಹನ ಸವಾರರು ಮರುಳಾಗಿರುವುದಂತೂ ನಿಜ.