ಇವತ್ತು ಜಗತ್ತಿನ ದೊಡ್ಡಣ್ಣ ಅಮೆರಿಕದ ಪಾಲಿಗೆ ಕರಾಳ ದಿನ. 15 ವರ್ಷಗಳ ಹಿಂದೆ ಇದೇ ದಿನ ನಡೆದ ಭೀಕರ ದಾಳಿಯೊಂದು 3000 ಮಂದಿ ಅಮಾಯಕರನ್ನು ಬಲಿ ಪಡೆದಿತ್ತು.
2001 ರ ಸೆಪ್ಟೆಂಬರ್ 11 ರಂದು ಅಲ್ ಖೈದಾ ಉಗ್ರ ಸಂಘಟನೆ ವಿಮಾನವನ್ನು ಹೈಜಾಕ್ ಮಾಡಿತ್ತು. ಎರಡು ವಿಮಾನಗಳನ್ನು ನ್ಯೂಯಾರ್ಕ್ ನ ವರ್ಲ್ಡ್ ಟ್ರೇಡ್ ಸೆಂಟರ್ ಗೆ ಡಿಕ್ಕಿ ಹೊಡೆಸಿತ್ತು.
ಅಲ್ ಖೈದಾದ ಈ ನೀಚ ಕೃತ್ಯದಲ್ಲಿ 2753 ಮಂದಿ ಸಾವನ್ನಪ್ಪಿದ್ರು. ಮೂರನೆಯ ದಾಳಿ ವಾಷಿಂಗ್ಟನ್ ನ ಪೆಂಟಗಾನ್ ಕಟ್ಟಡದ ಮೇಲೆ ನಡೆದಿತ್ತು, ಅಲ್ಲಿ 184 ಮಂದಿ ಹತರಾಗಿದ್ರು. ವಾಷಿಂಗ್ಟನ್ ನ ಶಂಕ್ಸ್ ವಿಲ್ಲೆಯಲ್ಲಿ ನಡೆದ ನಾಲ್ಕನೆಯ ದಾಳಿಯಲ್ಲಿ ಅಲ್ ಖೈದಾ 40 ಜನರನ್ನು ಬಲಿ ಪಡೆದಿತ್ತು.
ಬೆಳಗ್ಗೆ 8.46 – ಮೊದಲ ದಾಳಿ
ಐವರು ಹೈಜಾಕರ್ ಗಳನ್ನೊಳಗೊಂಡ 92 ಪ್ರಯಾಣಿಕರಿದ್ದ ಅಮೆರಿಕನ್ ಏರ್ ಲೈನ್ಸ್ ನ ಬೋಯಿಂಗ್ 767 ವಿಮಾನ ವರ್ಲ್ಡ್ ಟ್ರೇಡ್ ಸೆಂಟರ್ ನ ನಾರ್ತ್ ಟವರ್ ಗೆ ಡಿಕ್ಕಿ ಹೊಡೆದಿತ್ತು. ಕ್ಷಣಮಾತ್ರದಲ್ಲಿ ಆವರಿಸಿಕೊಂಡ ಬೆಂಕಿ ಮುಗಿಲೆತ್ತರಕ್ಕೆ ಚಾಚಿತ್ತು.
ಬೆಳಗ್ಗೆ 9.03 – ಎರಡನೆಯ ದಾಳಿ
ಐವರು ಹೈಜಾಕರ್ ಗಳನ್ನೊಳಗೊಂಡು 65 ಪ್ರಯಾಣಿಕರಿದ್ದ ಯುನೈಟೆಡ್ ಏರ್ ಲೈನ್ಸ್ ಬೋಯಿಂಗ್ 767 ವಿಮಾನ ಡಬ್ಲ್ಯೂಟಿಸಿಯ ಸೌತ್ ಟವರ್ ಗೆ ಡಿಕ್ಕಿಯಾಗಿ ಭಾರೀ ಸ್ಫೋಟ ಸಂಭವಿಸಿತ್ತು.
ಬೆಳಗ್ಗೆ 9.30 – ಜಾರ್ಜ್ ಬುಷ್ ಭಾಷಣ
ಫ್ಲೋರಿಡಾದಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಇದು ಭಯೋತ್ಪಾದಕರ ಕೃತ್ಯ ಅಂತಾ ಘೋಷಿಸಿದ್ರು. ಕೂಲಂಕುಷ ತನಿಖೆಗೆ ಆದೇಶಿಸಿದ್ರು.
ಬೆಳಗ್ಗೆ 9.37 – ಪೆಂಟಗಾನ್ ಮೇಲೆ ದಾಳಿ
ಐವರು ಹೈಜಾಕರ್ ಗಳನ್ನೊಳಗೊಂಡು 64 ಜನರನ್ನು ಹೊತ್ತಿದ್ದ ಅಮೆರಿಕನ್ ಏರ್ ಲೈನ್ಸ್ ನ ಬೋಯಿಂಗ್ 757 ವಿಮಾನ ಪೆಂಟಗಾನ್ ಮೇಲೆ ಅಪ್ಪಳಿಸಿತ್ತು. ಆಗ 2 ಭಾರೀ ವಿಸ್ಫೋಟಗಳು ಸಂಭವಿಸಿದ್ವು.
ಬೆಳಗ್ಗೆ 9.42 – ವಿಮಾನಗಳ ಭೂಸ್ಪರ್ಷ
ಅಮೆರಿಕದ ವಿಮಾನಯಾನ ಇಲಾಖೆ ಆದೇಶದ ಮೇರೆಗೆ ಎಲ್ಲಾ ವಿಮಾನಗಳು ತುರ್ತು ಭೂಸ್ಪರ್ಷ ಮಾಡಿದ್ವು.
ಬೆಳಗ್ಗೆ 9.59 – ಸೌತ್ ಟವರ್ ನೆಲಸಮ
ವಿಮಾನ ಡಿಕ್ಕಿಯಾಗಿ 56 ನಿಮಿಷಗಳ ನಂತರ ಭಾರೀ ಸದ್ದು, ಹೊಗೆ ಮತ್ತು ಧೂಳಿನ ಅಬ್ಬರದೊಂದಿಗೆ ವರ್ಲ್ಡ್ ಟ್ರೇಡ್ ಸೆಂಟರ್ ನ ಸೌತ್ ಟವರ್ ಕುಸಿದು ಬಿತ್ತು.
ಬೆಳಗ್ಗೆ 10.03 – ಪೆನ್ಸಿಲ್ವೇನಿಯಾದಲ್ಲಿ ದುಷ್ಕೃತ್ಯ
ಐವರು ಹೈಜಾಕರ್ ಗಳನ್ನೊಳಗೊಂಡು 44 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 757 ವಿಮಾನವನ್ನು ಉಗ್ರರು ಪೆನ್ಸಿಲ್ವೇನಿಯಾದ ಶಂಕ್ಸ್ ವಿಲ್ಲೆ ಬಳಿ ನೆಲಕ್ಕೆ ಅಪ್ಪಳಿಸಿದ್ರು.
ಬೆಳಗ್ಗೆ 10.28 – ನಾರ್ತ್ ಟವರ್ ನೆಲಸಮ
ವಿಮಾನ ಡಿಕ್ಕಿಯಾಗಿ 102 ನಿಮಿಷಗಳ ನಂತರ ಡಬ್ಲ್ಯೂಟಿಸಿಯ ನಾರ್ತ್ ಟವರ್ ಸಂಪೂರ್ಣ ಕುಸಿದು ಬಿತ್ತು. ಧೂಳು ಹಾಗೂ ಹೊಗೆ ಸುತ್ತಮುತ್ತಲ ಪ್ರದೇಶವನ್ನೆಲ್ಲ ಆವರಿಸಿತ್ತು.