ಪತಂಜಲಿ ಉತ್ಪನ್ನಗಳ ಮೂಲಕ ಭಾರತೀಯರ ಮನಸ್ಸು ಗೆಲ್ಲುವಲ್ಲಿ ಬಾಬಾ ರಾಮದೇವ್ ಯಶಸ್ವಿಯಾಗಿದ್ದಾರೆ. ಪತಂಜಲಿಯ ಸಾಕಷ್ಟು ಆಹಾರೋತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಉತ್ತರ ಪ್ರದೇಶ ಸರ್ಕಾರ, ಬಾಬಾ ರಾಮದೇವ್ ರ 2 ಸಾವಿರ ಕೋಟಿ ರೂಪಾಯಿ ಯೋಜನೆಗೆ ಅಸ್ತು ಎಂದಿದೆ.
ಕರ್ನಾಟಕ ಸೇರಿದಂತೆ 10 ಕಡೆ ಬೃಹತ್ ಪತಂಜಲಿ ಉತ್ಪಾದನ ಘಟಕ ಸ್ಥಾಪಿಸುವ ಬಗ್ಗೆಯೂ ಬಾಬಾ ರಾಮದೇವ್ ಚಿಂತನೆ ನಡೆಸಿದ್ದಾರೆ. ಈ ನಡುವೆ ಇನ್ನೊಂದು ಉದ್ಯಮಕ್ಕೆ ಧುಮುಕಲು ಬಾಬಾ ರಾಮದೇವ್ ಸಿದ್ಧತೆ ನಡೆಸಿದ್ದಾರೆ.
ಶೀಘ್ರದಲ್ಲಿಯೇ ಉಡುಪಿನ ಬ್ರ್ಯಾಂಡ್ ಗೆ ಬಾಬಾ ರಾಮದೇವ್ ಕೈ ಹಾಕಲಿದ್ದಾರೆ. ಬಾಬಾ ರಾಮದೇವ್ ರ ದೇಸಿ ಜೀನ್ಸ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕಚೇರಿಗೆ ಧರಿಸಬಹುದಾದಂತಹ ಬಟ್ಟೆಗಳ ಜೊತೆಗೆ ಜೀನ್ಸ್ ಕೂಡ ಇದರಲ್ಲಿ ಸೇರ್ಪಡೆಯಾಗಲಿದೆ. ಬಾಂಗ್ಲಾದೇಶ ಹಾಗೂ ಆಫ್ರಿಕಾ ದೇಶಗಳಲ್ಲಿಯೂ ಇದರ ಕಾರ್ಖಾನೆ ಆರಂಭವಾಗಲಿದೆ.
ಪತಂಜಲಿ ಯೋಗಾ ಡ್ರೆಸ್ ಬಗ್ಗೆ ಅಭಿಮಾನಿಗಳು ಕೇಳಿದ್ದರಂತೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಾಬಾ ರಾಮದೇವ್ ಯಾಕೆ ಬಟ್ಟೆ ಉದ್ಯಮಕ್ಕೆ ಕೈ ಹಾಕಬಾರ್ದು ಎಂದು ಚಿಂತಿಸಿದ್ರಂತೆ. ಪುರುಷರು ಹಾಗೂ ಮಹಿಳೆಯರ ಸಾಂಪ್ರದಾಯಿಕ ಉಡುಗೆಯೊಂದೇ ಅಲ್ಲ ಜೀನ್ಸ್ ಕೂಡ ಮಾರಾಟ ಮಾಡುವುದಾಗಿ ರಾಮದೇವ್ ಹೇಳಿದ್ದಾರೆ. ಅದಕ್ಕೆ ದೇಸಿ ಜೀನ್ಸ್ ಎನ್ನೋಣ ಎನ್ನುತ್ತಾರೆ ಬಾಬಾ.