ಮೌಂಟೇನ್ ಮ್ಯಾನ್ ಅಂತಾನೇ ಕರೆಸಿಕೊಂಡಿರುವ ಬಿಹಾರದ ದಶರಥ್ ಮಾಂಝಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರದಲ್ಲೂ ಒಬ್ಬ ಮಾಂಝಿ ಇದ್ದಾರೆ. ಅವರೇ ಬೀಡ್ ಜಿಲ್ಲೆಯ ಮಾರುತಿ ಸೋನಾವಣೆ.
ಧಾನೇಗಾಂವ್ ನಿವಾಸಿ ಮಾರುತಿ ಸೋನಾವಣೆ ಗುಂಡಿಬಿದ್ದ ರಸ್ತೆಗಳನ್ನೆಲ್ಲ ರಿಪೇರಿ ಮಾಡ್ತಿದ್ದಾರೆ. ಧಾನೇಗಾಂವ್ ಗೆ ಬರುವ ರಸ್ತೆ ಸಂಪೂರ್ಣ ಹೊಂಡ- ಗುಂಡಿಗಳಿಂದ ಗಬ್ಬೆದ್ದು ಹೋಗಿದೆ. ಇತ್ತೀಚೆಗಷ್ಟೆ ಗುಂಡಿಗಳಿಂದಾಗಿ ಬಸ್ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಮಾರುತಿ ಅವರ ಪತ್ನಿಯ ತಲೆಗೆ ಪೆಟ್ಟಾಗಿತ್ತು. ಸರ್ಕಾರದ ನೆರವಿಗೆ ಕಾಯದೇ, ಯಾವುದೇ ಯಂತ್ರಗಳ ನೆರವಿಲ್ಲದೆ ಮಾರುತಿ 2 ಕಿಲೋ ಮೀಟರ್ ರಸ್ತೆಯನ್ನು ರಿಪೇರಿ ಮಾಡಿದ್ದಾರೆ. ಅದು ಕೂಡ ತಮ್ಮ ಪತ್ನಿಯ ಮಾಂಗಲ್ಯವನ್ನು ಅಡವಿಟ್ಟು.
ಮನೆಯಲ್ಲಿ ಬಡತನವಿದ್ರೂ ಕಷ್ಟಪಟ್ಟು ಸಾರ್ವಜನಿಕ ರಸ್ತೆಯನ್ನು ದುರಸ್ತಿ ಮಾಡಿ ಜನಸಾಮಾನ್ಯರಿಗೆ ಮಾರುತಿ ಅನುಕೂಲ ಮಾಡಿಕೊಟ್ಟಿದ್ದಾರೆ. ಬಿಹಾರದ ಗಯಾ ಜಿಲ್ಲೆಯ ದಶರಥ್ ಮಾಂಜಿ ಕೂಡ ದೊಡ್ಡ ಪರ್ವತವನ್ನು ಏಕಾಂಗಿಯಾಗಿ ಕೊರೆದು 25 ವರ್ಷ ಶ್ರಮಪಟ್ಟು ಮಾರ್ಗ ನಿರ್ಮಿಸಿದ್ದರು.