ಪತ್ನಿಯ ರಕ್ಷಣೆ ಮಾಡುವುದು ಪತಿಯಾದವನ ಕರ್ತವ್ಯ. ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನೇ ಸಹೋದರನಿಗೆ ನೀಡಿದ್ದಾನೆ. ಅತ್ತಿಗೆಯ ಮೇಲೆ ಸಹೋದರ ಅತ್ಯಾಚಾರವೆಸಗುತ್ತಿದ್ದರೆ ಅದ್ರ ವಿಡಿಯೋ ಮಾಡಿದ್ದಾನೆ ಅಣ್ಣ.
ಘಟನೆ ನಡೆದಿರುವುದು ಮಧ್ಯ ಪ್ರದೇಶದ ಇಂದೋರ್ ನಲ್ಲಿ. ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸಲಾಗಿದೆ. ವರದಕ್ಷಿಣೆ ನೀಡದ ಹಿನ್ನೆಲೆಯಲ್ಲಿ ಪತಿ, ಸಹೋದರ ಸಂಬಂಧಿಯಿಂದ ಅತ್ಯಾಚಾರವೆಸಗಿಸಿದ್ದಾನೆ. ಇದರ ವಿಡಿಯೋ ಕೂಡ ಮಾಡಿದ್ದಾನೆಂದು ಆಕೆ ಆರೋಪಿಸಿದ್ದಾಳೆ.
ಎರಡು ಲಕ್ಷ ರೂಪಾಯಿ ಹಾಗೂ ಕಾರನ್ನು ವರದಕ್ಷಿಣೆ ರೂಪದಲ್ಲಿ ಕೇಳಿದ್ದರಂತೆ. ಇದನ್ನು ನೀಡದ ಕಾರಣ ಮಾನಸಿಕ ಹಾಗೂ ಶಾರೀರಿಕ ಶೋಷಣೆ ಮಾಡುತ್ತಿದ್ದರಂತೆ. ನಂತರ ಈ ಕೃತ್ಯವೆಸಗಿದ್ದಾರಂತೆ.