ದುಡ್ಡು ಬ್ಯಾಂಕ್ ನಲ್ಲೂ ಸೇಫ್ ಅಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಯಾಕಂದ್ರೆ ಹೈಟೆಕ್ ಎಟಿಎಂ ಕಳ್ಳರು ದುಡ್ಡು ಲಪಟಾಯಿಸ್ತಿದ್ದಾರೆ.
ತಿರುವನಂತಪುರಂನ ಮಹಿಳೆಯೊಬ್ಬರ ಅಕೌಂಟ್ ನಲ್ಲಿದ್ದ ಹಣ ವಿದೇಶದಲ್ಲಿ ಕಳುವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾಂಕೂರ್ ನ ಪಟ್ಟೊಂ ಬ್ರಾಂಚ್ ನಲ್ಲಿ ಅವರ ಖಾತೆ ಇದೆ. ಸೆಪ್ಟೆಂಬರ್ 3 ಮತ್ತು 5 ರಂದು ಯಾರೋ ಅವರ ಅಕೌಂಟ್ ನಿಂದ 55,000 ರೂಪಾಯಿ ವಿತ್ ಡ್ರಾ ಮಾಡಿದ್ದಾರಂತೆ, ಅದು ಕೂಡ ವಿದೇಶದಲ್ಲಿ.
ಪೊಲೀಸರು ಕೂಡ ಹಣ ವಿತ್ ಡ್ರಾ ಮಾಡಿರುವುದು ವಿದೇಶದ ಎಟಿಎಂ ಶಾಖೆಗಳಲ್ಲಿ ಅನ್ನೋದನ್ನ ದೃಢಪಡಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ವಿದೇಶಿ ಪ್ರಜೆಗಳು ನಡೆಸಿದ ಎಟಿಎಂ ಕಳ್ಳತನದಲ್ಲಿ ಹಲವರು ಹಣ ಕಳೆದುಕೊಂಡಿದ್ರು. ಆಗಸ್ಟ್ 10 ರಂದು ರೊಮೇನಿಯಾ ದೇಶದ ಓರ್ವ ವ್ಯಕ್ತಿ ಮತ್ತಿಬ್ಬರು ವಿದೇಶೀಯರೊಂದಿಗೆ ಸೇರಿಕೊಂಡು ಹೈಟೆಕ್ ಎಟಿಎಂ ವಂಚನೆ ನಡೆಸಿದ್ದ.
ಆರೋಪಿಗಳನ್ನು ಮುಂಬೈನಲ್ಲಿ ಸೆರೆಹಿಡಿಯಲಾಗಿತ್ತು. ಗ್ರಾಹಕರ ಬ್ಯಾಂಕ್ ವಿವರ ಪತ್ತೆ ಮಾಡಿ, ನಕಲಿ ಎಟಿಎಂ ಕಾರ್ಡ್ ಬಳಸಿ ಖದೀಮರು ಹಣ ವಿತ್ ಡ್ರಾ ಮಾಡಿದ್ದರು.