ಇಂಗ್ಲೆಂಡ್ ನ Gloucestershire ನಿವಾಸಿ, 16 ವರ್ಷದ ಬಾಲಕಿ ಬ್ಯೂ ಜೆಸ್ಸಪ್ ಇದುವರೆಗೆ 45 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಮಕ್ಕಳಿಗೆ ಅಂದದ ಹೆಸರು ಸೂಚಿಸುವ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ.
ಜೆಸ್ಸಪ್ ಒಮ್ಮೆ ಚೀನಾ ಪ್ರವಾಸಕ್ಕೆ ತೆರಳಿದ್ಲು, ಅಲ್ಲಿ ಮಕ್ಕಳ ಇಂಗ್ಲಿಷ್ ಹೆಸರುಗಳಿಗೆ ಬಹು ಬೇಡಿಕೆ ಇರೋದು ಜೆಸ್ಸಪ್ ಗಮನಕ್ಕೆ ಬಂತು. ಇಂಗ್ಲೆಂಡ್ ಗೆ ವಾಪಸ್ಸಾಗ್ತಿದ್ದಂತೆ ಜೆಸ್ಸಪ್ ‘ಸ್ಪೆಷಲ್ ನೇಮ್ಸ್ ಡಾಟ್ ಸಿಎನ್’ ಅನ್ನೋ ವೆಬ್ ಸೈಟ್ ಒಂದನ್ನು ಆರಂಭಿಸಿದ್ಲು.
ಈ ವೆಬ್ ಸೈಟ್ ನಲ್ಲಿ ಚೀನಾದ ಮಕ್ಕಳಿಗೆ ಇಂಗ್ಲಿಷ್ ಹೆಸರುಗಳನ್ನು ಸೂಚಿಸಲಾಗುತ್ತೆ. ಮಗು ಹೆಣ್ಣೋ, ಗಂಡೋ ಅನ್ನೋ ಕಾಲಮ್ ಅನ್ನು ಪೋಷಕರು ಭರ್ತಿ ಮಾಡಬೇಕು. ಹುಟ್ಟೋ ಮಗುವಿನ ಬಗ್ಗೆ ಅವರಿಗೇನು ಆಕಾಂಕ್ಷೆ, ನಿರೀಕ್ಷೆ ಇದೆ ಅನ್ನೋದನ್ನು ತಿಳಿಸಿದ್ರೆ ಸುಂದರವಾದ ಅರ್ಥಪೂರ್ಣ ಹೆಸರು ಹುಡುಕುವ ಜವಾಬ್ಧಾರಿ ಜೆಸ್ಸಪ್ ಳದ್ದು.
ಈಗಾಗ್ಲೇ 221,000 ಪೋಷಕರು ಈ ವೆಬ್ ಸೈಟ್ ಸೇವೆಯನ್ನು ಬಳಸಿಕೊಂಡಿದ್ದಾರೆ. ಈ ವೆಬ್ ಸೈಟ್ ನಿಂದ ಜೆಸ್ಸಪ್ ಪ್ರತಿ ತಿಂಗಳು 14,20,231 ರೂಪಾಯಿ ಸಂಪಾದನೆ ಮಾಡ್ತಿದ್ದಾಳೆ. ವೆಬ್ ಸೈಟ್ ದುಡಿಮೆಯಿಂದ್ಲೇ ಕಾಲೇಜು ಶುಲ್ಕವನ್ನು ಸಂಪೂರ್ಣ ಭರಿಸುವಂತಾಗಬೇಕು ಅನ್ನೋದು ಜೆಸ್ಸಪ್ ಬಯಕೆ. ಈ ಆಸೆ ಕೂಡ ಸದ್ಯದಲ್ಲೇ ಕೈಗೂಡುವುದರಲ್ಲಿ ಅನುಮಾನವಿಲ್ಲ.