ಸ್ಪೇನ್ ನಲ್ಲಿ ಭೀಕರ ರೈಲು ದುರಂತವೊಂದು ಸಂಭವಿಸಿದೆ. ರೈಲು ಹಳಿ ತಪ್ಪಿದ ಪರಿಣಾಮ, ನಾಲ್ಕಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 50 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಈ ರೈಲು ವಿಗೋನಿಂದ ಪೋರ್ಚುಗಲ್ ನ ಪೋರ್ಟೋಗೆ ಹೊರಟಿತ್ತು. ಓ ಪೊರಿನೊ ಎಂಬ ನಗರದಲ್ಲಿ ರೈಲು ಹಳಿ ತಪ್ಪಿದೆ. ಲೋಕೋ ಪೈಲಟ್ ಸೇರಿದಂತೆ ಈ ರೈಲಿನಲ್ಲಿ 64 ಮಂದಿ ಪ್ರಯಾಣಿಸುತ್ತಿದ್ದರು. ಲೋಕೋ ಪೈಲಟ್ ಕೂಡ ದುರಂತದಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೇತುವೆಯ ಮೇಲ್ಮೈಗೆ ಡಿಕ್ಕಿಯಾಗಿ ರೈಲು ಹಳಿ ತಪ್ಪಿದೆ ಎನ್ನಲಾಗ್ತಾ ಇದೆ.
ರೈಲಿನ ಮುಂದಿನ ಬೋಗಿ ಹಳಿ ತಪ್ಪಿದ್ದು, ವಿದ್ಯುತ್ ತಂತಿಗೆ ಸಿಕ್ಕಿಹಾಕಿಕೊಂಡಿದೆ. ಕೂಡಲೇ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೊರಿನೋ ನಗರದ ರೈಲ್ವೆ ನಿಲ್ದಾಣದ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಬಂದ್ರು. ಹೆಲಿಕಾಪ್ಟರ್ ನಲ್ಲಿ ವೈದ್ಯರನ್ನು ಕರೆಸಿ, ರೈಲು ದುರಂತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಯ್ತು.