ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಲೋಖಂಡೆ ಬದುಕಲ್ಲಿ ಒಂದರ ಮೇಲೆಂದು ಅವಘಡಗಳು ನಡೆಯುತ್ತಲೇ ಇವೆ. ಪ್ರಿಯಕರ ಸುಶಾಂತ್ ಸಿಂಗ್ ರಜಪೂತ್ ಜೊತೆಗಿನ ಬ್ರೇಕಪ್ ಬೆನ್ನಲ್ಲೇ ಅಂಕಿತಾ ಬಲಗೈ ಮುರಿದುಕೊಂಡಿದ್ರು.
ಇದೀಗ ಬೆಂಕಿ ಅನಾಹುತವೊಂದರಲ್ಲಿ ಅಂಕಿತಾ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಗಣೇಶ ಚತುರ್ಥಿ ದಿನ ಪೂಜೆ ಮಾಡುವ ಸಂದರ್ಭದಲ್ಲಿ ಅಂಕಿತಾ ಬೆಡ್ ರೂಮ್ ನಲ್ಲಿದ್ದ ಕರ್ಟನ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ಕ್ಷಣಮಾತ್ರದಲ್ಲಿ ಬೆಂಕಿಯ ಕೆನ್ನಾಲಗೆ ಇಡೀ ಕೋಣೆಯನ್ನು ಆವರಿಸಿಕೊಂಡಿತ್ತು. ಅಂಕಿತಾ ಬೆಂಕಿ ನಂದಿಸಲು ಹರಸಾಹಸಪಟ್ರು, ಈ ಪ್ರಯತ್ನದಲ್ಲಿ ಅಂಕಿತಾ ಅವರ ಕುತ್ತಿಗೆ ಮತ್ತು ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ.
ತಾವು ಮಾಡಿದ ಒಳ್ಳೆಯ ಕೆಲಸಗಳೇ ತಮ್ಮನ್ನು ಕಾಪಾಡಿದೆ ಅಂತಾ ಅಂಕಿತಾ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ. ದೇವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಸದ್ಯ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಅಂಕಿತಾ ಆದಷ್ಟು ಬೇಗ ಗುಣವಾಗಲಿ ಅನ್ನೋದು ಅವರ ಅಭಿಮಾನಿಗಳ ಹಾರೈಕೆ.