ಹೆರಿಗೆ ರಜೆ ಅಂದಾಕ್ಷಣ ಮಹಿಳೆಯರೆಲ್ಲ ಮನೆಯಲ್ಲಿ ವಿಶ್ರಾಂತಿ ತಗೋತಾರೆ, ಬಾಣಂತನ ಮಾಡಿಸ್ಕೋತಾರೆ. ಮಗುವಿನ ಲಾಲನೆ ಪಾಲನೆ ಅಂತಾ ಇರುವವರೇ ಹೆಚ್ಚು.
ಆದ್ರೆ ಲಂಡನ್ ನ ಕರೆನ್ ಎಡ್ವರ್ಡ್ ಮಾತ್ರ ಹೆರಿಗೆ ರಜೆಯಲ್ಲಿ 11 ದೇಶಗಳನ್ನು ಸುತ್ತಿ ಬಂದಿದ್ದಾರೆ. ಕರೆನ್ ಗೆ ಮೊದಲಿನಿಂದ್ಲೂ ಟ್ರಾವೆಲಿಂಗ್ ಹುಚ್ಚು, 8 ವರ್ಷಗಳಲ್ಲಿ ಆಕೆ 60 ದೇಶಗಳನ್ನು ನೋಡಿ ಬಂದಿದ್ದಾರೆ. ಪತಿ ಶಾನ್ ಕೂಡ ಕರೆನ್ ಗೆ ಸಾಥ್ ಕೊಡ್ತಾರೆ.
ಈ ದಂಪತಿಗೆ ಕೆಲ ದಿನಗಳ ಹಿಂದಷ್ಟೆ ಎಸ್ಮೆ ಎಂಬ ಮುದ್ದಾದ ಹೆಣ್ಣು ಮಗು ಜನಿಸಿದೆ. ವಿಶೇಷ ಅಂದ್ರೆ ಹಸುಗೂಸು ಎಸ್ಮೆ ಜೊತೆ ದೇಶ ಸುತ್ತುತ್ತ ಈ ದಂಪತಿ ಹೆರಿಗೆ ರಜೆ ಕಳೆದಿದ್ದಾರೆ. ಶಿಶುವನ್ನು ಕರೆದುಕೊಂಡೇ ಅವರು ಸುದೀರ್ಘ ವಿಮಾನ ಪ್ರಯಾಣ, ರೋಡ್ ಟ್ರಿಪ್, ಸೈಕಲ್ ಸವಾರಿ ಎಲ್ಲವನ್ನೂ ಮಾಡಿದ್ದಾರೆ.
ಮಗುವಿಗೆ ಎದೆಹಾಲು ಉಣಿಸುವ ಸಂದರ್ಭದಲ್ಲಿ ಟ್ರಾವೆಲ್ ಮಾಡಿದ್ರೆ ಒಳ್ಳೆಯದು ಅಂತಾ ವೈದ್ಯರು ಕೂಡ ಸಲಹೆ ನೀಡಿದ್ದರಂತೆ. ಅದ್ರಿಂದ ಮಗುವಿನ ಇಮ್ಯೂನ್ ಸಿಸ್ಟಮ್ ಸುಧಾರಿಸುತ್ತೆ ಅನ್ನೋದು ವೈದ್ಯರ ಕಿವಿಮಾತು. ಬಾಣಂತಿ ಅಂತಾ ಮನೆಯಲ್ಲಿ ಕೂರದೆ ಹಸುಗೂಸನ್ನು ಕರೆದುಕೊಂಡು ವಿಶ್ವ ಪರ್ಯಟನೆ ಮಾಡಿ ಬಂದ ಕರೆನ್ ನಿಜಕ್ಕೂ ಸಾಹಸಿ ಮಹಿಳೆ.