ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗೆ ಒಂದೇ ದಿನ ಎರಡೆರಡು ಸಿಹಿ ಸುದ್ದಿ ಸಿಕ್ಕಿದೆ. ಲಾಲು ಪ್ರಸಾದ್ ಯಾದವ್ ರ ಇಬ್ಬರು ಹೆಣ್ಣು ಮಕ್ಕಳಿಗೂ ಗಂಡು ಮಗು ಜನಿಸಿದೆ. ಮೀಸಾ ಭಾರತಿ ಹಾಗೂ ರಾಜಲಕ್ಷ್ಮಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಲಾಲು ಮನೆಗೆ ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ.
ಮುಲಾಯಂ ಸಿಂಗ್ ಯಾದವ್ ಮೊಮ್ಮಗ ತೇಜ್ ಪ್ರತಾಪ್ ಸಿಂಗ್ ಯಾದವ್ ಹಾಗೂ ರಾಜ್ಯಸಭಾ ಸದಸ್ಯೆ ಮೀಸಾ ಭಾರತಿ ಈ ಖುಷಿ ವಿಷಯವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಜ್ಯಸಭಾ ಸದಸ್ಯೆ ಮೀಸಾ, ಫೇಸ್ಬುಕ್ ಹಾಗೂ ಟ್ವಿಟರ್ ನಲ್ಲಿ ನವಜಾತ ಶಿಶುವಿನ ಫೋಟೋ ಹಾಕಿ,ಆಶೀರ್ವಾದ ಕೇಳಿದ್ದಾರೆ. ಬುಧವಾರ ಬೆಳಿಗ್ಗೆ ಪುನಃ ಅಮ್ಮನಾಗುವ ಭಾಗ್ಯ ನನಗೆ ಸಿಕ್ತು ಎಂದು ಮೀಸಾ ಫೇಸ್ಬುಕ್ ನಲ್ಲಿ ಹೇಳಿದ್ದಾರೆ. ಮೀಸಾಗೆ ಈಗಾಗಲೇ ದುರ್ಗಾ(14) ಗೌರಿ( 7) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಇನ್ನು ಲಾಲು ಪ್ರಸಾದ್ ಕಿರಿಯ ಮಗಳು ರಾಜಲಕ್ಷ್ಮಿಗೆ ಇದು ಮೊದಲನೆಯ ಮಗು. ರಾಜಲಕ್ಷ್ಮಿ ಮದುವೆ ಮೈನ್ಪುರಿ ಸಂಸದ ತೇಜ್ ಪ್ರತಾಪ್ ಸಿಂಗ್ ಜೊತೆ ನಡೆದಿತ್ತು. 2015 ಫೆಬ್ರವರಿ 26ರಂದು ರಾಜಲಕ್ಷ್ಮಿ, ತೇಜ್ ಪ್ರತಾಪ್ ಕೈ ಹಿಡಿದಿದ್ದರು. ಲಾಲು ಪ್ರಸಾದ್ ಯಾದವ್ ಇಬ್ಬರು ಪುತ್ರಿಯರ ಡಿಲೆವರಿ ದೆಹಲಿ ಹಾಗೂ ಪಾಟ್ನಾ ಆಸ್ಪತ್ರೆಯಲ್ಲಾಗಿದೆ.