94 ವರ್ಷದ ವೃದ್ದೆಯೊಬ್ಬರು ಇಳಿ ವಯಸ್ಸಿನಲ್ಲಿ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಲ್ಲದೇ ಇದೀಗ ಗ್ರಾಮ ಸರಪಂಚ್ ಆಗುವ ಮೂಲಕ ದಾಖಲೆ ಮಾಡಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾಂಬೂರ್ವಾಡಿ ಗ್ರಾಮದ ಗಂಗೂಬಾಯಿ, ಕಳೆದ ಅಕ್ಟೋಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಪದವೀಧರೆಯಾಗಿದ್ದ ಮಹಿಳೆಯೊಬ್ಬರ ವಿರುದ್ದ ಸ್ಪರ್ಧಿಸಿ, 50 ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಸದಸ್ಯರಾಗಿ ಆಯ್ಕೆಯಾಗಿದ್ದರು.
ಇದೀಗ ಸರಫಂಚ್ ಆಗಿ ಆಯ್ಕೆಯಾಗಿರುವ ಗಂಗೂಬಾಯಿ, ಗ್ರಾಮದ ಅಭಿವೃದ್ದಿಗೆ ಶ್ರಮಿಸುವುದಾಗಿ ಹೇಳಿದ್ದಾರಲ್ಲದೇ ಕೆಲವೊಂದು ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಈ ವಯಸ್ಸಿನಲ್ಲೂ ಬೆಳಿಗ್ಗೆ 5 ಗಂಟೆಗೆ ಏಳುವ ಗಂಗೂಬಾಯಿ, ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಮಿತಾಹಾರ ಸೇವನೆಯೇ ತಮ್ಮ ಆರೋಗ್ಯದ ಗುಟ್ಟು ಎನ್ನುವ ಗಂಗೂಬಾಯಿ ಈಗಲೂ ಲವಲವಿಕೆಯಿಂದಿದ್ದಾರೆ.