ರಿಲಯೆನ್ಸ್ ಜಿಯೋ ಭರ್ಜರಿ ಕೊಡುಗೆಯಿಂದ ಬೇರೆ ಬೇರೆ ನೆಟ್ವರ್ಕ್ ಗ್ರಾಹಕರಿಗೂ ಒಳ್ಳೆ ದಿನಗಳು ಕಾದಿವೆ. ಜಿಯೋ ಜೊತೆಗೆ ಪೈಪೋಟಿಗಿಳಿಯಲು ಮುಂದಾಗಿರುವ ಭಾರ್ತಿ ಏರ್ಟೆಲ್, ವೊಡಾಫೋನ್ ಮತ್ತು ಐಡಿಯಾ ತಮ್ಮ ಟಾರಿಫ್ ಪ್ಲಾನ್ ಕಡಿತಕ್ಕೆ ಮುಂದಾಗಿವೆ.
ರಿಲಯೆನ್ಸ್ ಜಿಯೋಗೆ ಸರಿಸಮನಾಗಿ ಡಿಸ್ಕೌಂಟ್, ವ್ಯಾಲ್ಯೂ ಎಡಿಷನ್ ಮತ್ತು ವಿಶಿಷ್ಟ ಕೊಡುಗೆಗಳನ್ನು ನೀಡಲು ಪ್ಲಾನ್ ಮಾಡಿವೆ. ಲೈಫ್ ಟೈಮ್ ಉಚಿತ ವಾಯ್ಸ್ ಕಾಲಿಂಗ್, ರೋಮಿಂಗ್ ಫ್ರೀ, ವರ್ಷಾಂತ್ಯದವರೆಗೆ ಅನ್ ಲಿಮಿಟೆಡ್ ಡೇಟಾ ಪ್ಲಾನ್ ಮೂಲಕ ಜಿಯೋ ಈಗಾಗ್ಲೇ ಟೆಲಿಕಾಂ ಕ್ಷೇತ್ರದ ಕಿಂಗ್ ಎನಿಸಿಕೊಂಡಿದೆ.
ಹಾಗಾಗಿ ಏರ್ಟೆಲ್ ತನ್ನ ಪೋಸ್ಟ್ ಪೇಯ್ಡ್ ಟ್ಯಾರಿಫ್ ಗಳಲ್ಲಿ ಶೇ.20 ರಷ್ಟು ಕಡಿತ ಮಾಡಿದೆ. ವೊಡಾಫೋನ್ ಕೂಡ 1499 ರೂಪಾಯಿಗೂ ಮೇಲ್ಪಟ್ಟ ಪ್ಲಾನ್ ಗಳಲ್ಲಿ ಬದಲಾವಣೆ ಮಾಡ್ತಾ ಇದೆ. ಜಿಯೋಗೆ ಟಕ್ಕರ್ ಕೊಡಲು ಮಾಸ್ಟರ್ ಪ್ಲಾನ್ ಮಾಡ್ತಾ ಇರೋ ಏರ್ಟೆಲ್ ಹಾಗೂ ವೊಡಾಫೋನ್ ತಮ್ಮ ನೆಟ್ವರ್ಕ್ ಅದ್ಭುತ ಎಂದು ಕೊಂಡಾಡಿವೆ.
ಜಿಯೋ, ಗ್ರಾಹಕರನ್ನು ಮರುಳು ಮಾಡಲು ಗಿಮಿಕ್ ಮಾಡ್ತಾ ಇದೆ, ರಿಲಯೆನ್ಸ್ ನೆಟ್ವರ್ಕ್ ಸೀಮಿತ ಕವರೇಜ್ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ ಅನ್ನೋದು ಅವರ ವಾದ. ಅದೇನೇ ಆದ್ರೂ ರಿಲಯೆನ್ಸ್ ಜಿಯೋ ಅಲೆಯಲ್ಲಿ ಕೊಚ್ಚಿ ಹೋಗುವ ಭೀತಿ ಇತರ ಟೆಲಿಕಾಂ ಸಂಸ್ಥೆಗಳನ್ನು ಕಾಡುತ್ತಿದೆ.