ಕಳೆದ ಬಾರಿಯ ಲಂಡನ್ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿ ಕೊಟ್ಟಿದ್ದ ಮೇರಿ ಕೋಮ್, ಈ ಬಾರಿಯ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದು, ಆ ಮೂಲಕ ಭಾರೀ ನಿರಾಸೆಗೆ ಕಾರಣರಾಗಿದ್ದಾರೆ.
51 ಕೆ.ಜಿ. ವಿಭಾಗದಲ್ಲಿ ಶನಿವಾರದಂದು ನಡೆದ ಪಂದ್ಯದಲ್ಲಿ ಜರ್ಮನಿಯ ಅಝೈಜ್ ನಿಮಾನಿ ಎದುರು ಪರಾಭವಗೊಳ್ಳುವ ಮೂಲಕ ಮೇರಿ ಕೋಮ್ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾದರು.
ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮೇರಿ ಕೋಮ್, ಈ ಬಾರಿಯ ಒಲಂಪಿಕ್ಸ್ ಗೆ ಭಾರೀ ಸಿದ್ದತೆ ನಡೆಸಿದ್ದು, ಇಂದಿನ ಫಲಿತಾಂಶದ ಮೂಲಕ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುವ ಅವರ ಹಾಗೂ ಭಾರತೀಯರ ಕನಸು ಭಗ್ನವಾಗಿದೆ.