‘ಏ ದಿಲ್ ಹೈ ಮುಷ್ಕಿಲ್’ ಚಿತ್ರದ ಟೀಸರ್ ನೋಡಿದವರು ಐಶ್ವರ್ಯಾ ರೈಯನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ. ಬೇರೆಯವರ ಮಾತು ಹಾಗಿರ್ಲಿ, ಮಾಜಿ ಪ್ರೇಮಿ ಸಲ್ಮಾನ್ ಖಾನ್ ಕೂಡ ‘ಏ ದಿಲ್ ಹೈ ಮುಷ್ಕಿಲ್’ ನಲ್ಲಿ ಐಶೂ ನೋಡಿ ಸೂಪರ್ ಅಂದಿದ್ದಾರೆ.
‘ಏ ದಿಲ್ ಹೈ ಮುಷ್ಕಿಲ್’ ನಲ್ಲಿ ಐಶ್ವರ್ಯಾಳನ್ನು ನೋಡಿದ ಸಲ್ಮಾನ್ ‘ಶಿ ಈಸ್ ಸೋ ಬ್ಯೂಟಿಫುಲ್’ ಅಂತಾ ಉದ್ಘರಿಸಿದ್ದಾರೆ. ಇದರಲ್ಲಿ ಸಲ್ಮಾನ್ ತಪ್ಪೇನೂ ಇಲ್ಲ ಬಿಡಿ, ಯಾಕಂದ್ರೆ ಐಶ್ವರ್ಯಾ ಅಷ್ಟು ಸುಂದರವಾಗಿ ಕಾಣಿಸ್ತಿದ್ದಾರೆ. ಚಿತ್ರದ ಹಾಡೊಂದರಲ್ಲಿ ಐಶ್ವರ್ಯಾ, ರಣಬೀರ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡ್ತಾರೆ. ಅವರಿಬ್ಬರ ಜೋಡಿ ನೋಡಿ ಅಭಿಮಾನಿಗಳು ಈಗಾಗ್ಲೇ ಶಹಬ್ಬಾಸ್ ಎಂದಿದ್ದಾರೆ.
15 ಮಿಲಿಯನ್ ಗೂ ಹೆಚ್ಚು ಮಂದಿ ಟೀಸರ್ ವೀಕ್ಷಿಸಿದ್ದಾರೆ. ಆದ್ರೆ ರಣಬೀರ್ ಬಗ್ಗೆ ಸಲ್ಲು ಒಂದಕ್ಷರ ಮಾತನಾಡಿಲ್ಲ. ಸಲ್ಮಾನ್ ಹಾಗೂ ಐಶ್ವರ್ಯಾ ಬಾಲಿವುಡ್ ನ ಹಿಟ್ ಜೋಡಿಯಾಗಿತ್ತು, ಅದೇ ರೀತಿ ಅವರಿಬ್ಬರ ಬ್ರೇಕಪ್ ಕೂಡ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈಗ ಐಶೂ ಬಚ್ಚನ್ ಕುಟುಂಬದ ಸೊಸೆ. ಅಪ್ಪಿತಪ್ಪಿಯೂ ಸಲ್ಲು ಹಾಗೂ ಐಶ್ವರ್ಯಾ ಒಂದೇ ಫಂಕ್ಷನ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ತುಂಬಾ ವರ್ಷಗಳ ನಂತರ ಸಲ್ಮಾನ್, ಐಶ್ವರ್ಯಾ ಬಗ್ಗೆ ಒಂದೊಳ್ಳೆ ಮಾತನಾಡಿದ್ದಾರೆ ಅನ್ನೋದೇ ವಿಶೇಷ.