ಇತ್ತೀಚೆಗಷ್ಟೆ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಝ್ ಖಯಾನಿ ಅವರ ಪುತ್ರನ ಅಪಹರಣವಾಗಿತ್ತು. ಆತನ ಬಿಡುಗಡೆಗಾಗಿ ಪಾಕಿಸ್ತಾನ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಜವಾಹಿರಿಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಬಿಡುಗಡೆ ಮಾಡಿದೆ.
ವಾರದ ಹಿಂದಷ್ಟೆ ಈ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪರಸ್ಪರ ಬಿಡುಗಡೆ ಕಾರ್ಯ ನಡೆದಿದೆ ಎನ್ನಲಾಗಿದೆ. ಅಲ್ ಖೈದಾ ಖಯಾನಿ ಪುತ್ರನನ್ನು ಕಿಡ್ನಾಪ್ ಮಾಡಿ, ಜವಾಹಿರಿ ಪುತ್ರಿಯರನ್ನು ಬಿಡುಗಡೆ ಮಾಡಿಸಿದೆ ಅಂತಾದ್ರೆ, ಪಾಕ್ ನೊಳಕ್ಕೆ ಅಲ್ ಖೈದಾ ಉಗ್ರರಿಗೆ ಎಂಟ್ರಿ ಕಷ್ಟವೇನಿಲ್ಲ ಅಂತಾ ಅಲ್ ಮಶ್ರಾ ಮ್ಯಾಗಝೀನ್ ವರದಿ ಮಾಡಿದೆ.
ಪಾಕಿಸ್ತಾನ ಸೇನೆ ತನ್ನ ಕಾರ್ಯಾಚರಣೆಯ ಭಾಗವಾಗಿ ಜವಾಹಿರಿ ಪುತ್ರಿಯರನ್ನು ಬಂಧಿಸಿತ್ತು. ಈ ವಿಚಾರವನ್ನು ಟ್ವಿಟ್ಟರ್ ಖಾತೆಯೊಂದರಲ್ಲಿ ಬಹಿರಂಗಪಡಿಸಲಾಗಿತ್ತು. ಆ ಟ್ವಿಟ್ಟರ್ ಖಾತೆದಾರ ಬಹುಷಃ ಅಲ್ ಖೈದಾ ಸಂಘಟನೆಯವನಾಗಿದ್ದು, ಈ ಸಂದರ್ಭವನ್ನು ನಿಭಾಯಿಸಲು ನಮ್ಮ ಬಳಿ ಎರಡು ಅಸ್ತ್ರವಿದೆ ಎಂದು ಬರೆದಿದ್ದ. ಒಂದು ಪ್ರತೀಕಾರ ತೀರಿಸಿಕೊಳ್ಳುವುದು, ಇನ್ನೊಂದು ಕಯಾನಿ ಪುತ್ರನನ್ನು ಅಪಹರಿಸುವುದು. ಇಷ್ಟೆಲ್ಲಾ ಟ್ವೀಟ್ ಗಳ ಬಳಿಕ ಆತ ತನ್ನ ಅಕೌಂಟ್ ಡಿಲೀಟ್ ಮಾಡಿದ್ದಾನೆ. ಇತ್ತ ಪಾಕ್ ಸೇನೆಯಿಂದ ಆರಾಮಾಗಿ ಬಿಡುಗಡೆಯಾದ ಜವಾಹಿರಿ ಪುತ್ರಿಯರು, ಮತ್ತವರ ಮಕ್ಕಳು ಈಜಿಪ್ಟ್ ಗೆ ಪ್ರಯಾಣ ಬೆಳೆಸಿದ್ದಾರಂತೆ.