ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಕೈಯಲ್ಲಿ ಇವತ್ತು ಪೊರಕೆಯಿತ್ತು. ಫಡ್ನವಿಸ್ ಹಾಗೂ ಅಮಿತಾಬ್ ಬಚ್ಚನ್ ಇಬ್ರೂ ಇವತ್ತು ಮಹಾರಾಷ್ಟ್ರದ ಜೆಜೆ ಆಸ್ಪತ್ರೆಯ ಆವರಣವನ್ನು ಸ್ವಚ್ಛ ಮಾಡಿದ್ದಾರೆ.
ಮಹಾ ಕ್ಲೀನಥಾನ್ ಅಭಿಯಾನದ ಭಾಗವಾಗಿ ಇವರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ರು. ಅಕ್ಟೋಬರ್ 2 ರೊಳಗೆ ರಾಜ್ಯದ 50 ನಗರಗಳು ಸಂಪೂರ್ಣ ಸ್ವಚ್ಛವಾಗಲಿವೆ ಅಂತಾ ಸಿಎಂ ಫಡ್ನವಿಸ್ ಹೇಳಿದ್ದಾರೆ. ನಾವಿಲ್ಲಿ ಭಾಷಣ ಮಾಡಲು ಬಂದಿಲ್ಲ ಎಂದ ಅಮಿತಾಬ್ ಬಚ್ಚನ್, ನಾವೇ ನಮ್ಮ ನಗರವನ್ನು ಸ್ವಚ್ಛ ಮಾಡಿಕೊಳ್ಳಬೇಕು ಅಂತಾ ಕಿವಿಮಾತು ಹೇಳಿದ್ದಾರೆ.
ಪ್ರತಿಯೊಬ್ಬರು ತಮ್ಮ ಮನೆಯ ಅಕ್ಕಪಕ್ಕದಲ್ಲಿ 10 ಅಡಿ ಜಾಗವನ್ನು ಕ್ಲೀನ್ ಮಾಡಿದ್ರೆ ಇಡೀ ನಗರ ಸ್ವಚ್ಛವಾಗುವುದರಲ್ಲಿ ಅನುಮಾನವೇ ಇಲ್ಲ ಅನ್ನೋದು ಬಿಗ್ ಬಿ ಅಭಿಪ್ರಾಯ. 73ರ ಹರೆಯದ ಬಾಲಿವುಡ್ ಶೆಹನ್ ಶಾ ಕೇವಲ ನೆಪ ಮಾತ್ರಕ್ಕೆ ಪೊರಕೆ ಹಿಡಿಯಲಿಲ್ಲ, ಬರಿಗೈಯ್ಯಲ್ಲೇ ಕಸವನ್ನೆಲ್ಲ ಎತ್ತಿ ಹಾಕುವ ಮೂಲಕ ಇತರ ಸೆಲೆಬ್ರಿಟಿಗಳಿಗೂ ಮಾದರಿಯಾದ್ರು.