ಏರ್ ಇಂಡಿಯಾದ ಪೈಲಟ್ ಒಬ್ಬ 200 ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡಿದ್ದಾನೆ. ಏಪ್ರಿಲ್ 28ರಂದು ನಡೆದ ಘಟನೆ ಇದು. ಏರ್ ಇಂಡಿಯಾ ಬೋಯಿಂಗ್ 787 ವಿಮಾನ ದೆಹಲಿಯಿಂದ ಪ್ಯಾರಿಸ್ ಗೆ ಹೊರಟಿತ್ತು.
ತಮಾಷೆ ಮೂಡ್ ನಲ್ಲಿದ್ದ ವಿಮಾನದ ಕಮಾಂಡರ್, ಫ್ಲೈಟನ್ನು ಸುರಕ್ಷತಾ ಮಟ್ಟವನ್ನು ಮೀರಿ ಅತ್ಯಂತ ಎತ್ತರಕ್ಕೆ ಹಾರಿಸಿದ್ದಾನೆ. ಈ ಮೊದಲು ಸಹ ಇದೇ ಪೈಲಟ್ ಇಂತಹ ವರ್ತನೆ ತೋರಿದ್ದ ಎನ್ನಲಾಗಿದೆ. ಅತ್ಯಂತ ಎತ್ತರಕ್ಕೆ ಕೊಂಡೊಯ್ದಿದ್ದರಿಂದ ಅಲ್ಲಿ ವಿಮಾನ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಯೂ ಇತ್ತು. ವಿಮಾನದ ಅಸಹಜ ಹಾರಾಟವನ್ನು ಗಮನಿಸಿದ ಕೋ ಪೈಲಟ್, ಸಹಜ ಸ್ಥಿತಿಗೆ ತರುವಂತೆ ಸೂಚಿಸಿದ್ದಾನೆ.
ಪ್ರಯಾಣಿಕರ ಸುರಕ್ಷತೆ ಜೊತೆ ಚೆಲ್ಲಾಟವಾಡಿದ ಪೈಲಟ್ ನನ್ನು ಅಮಾನತು ಮಾಡಿರುವ ಡಿಜಿಸಿಎ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಅಷ್ಟೇ ಅಲ್ಲ ಪೈಲಟ್ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸುವಂತೆ ಸೂಚಿಸಲಾಗಿದೆ. ಇತ್ತೀಚೆಗೆ ವಾಯುಯಾನ ಸುರಕ್ಷತಾ ಕ್ರಮಗಳ ಉಲ್ಲಂಘನೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ.