ನವದೆಹಲಿ: ಆಟಗಾರರಿಗೆ ಸಾಮರ್ಥ್ಯ ತೋರಲು ಉತ್ತಮ ವೇದಿಕೆ ಎಂದೇ ಹೇಳಲಾಗುವ, ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಅಕ್ಟೋಬರ್ 6 ರಿಂದ ಆರಂಭವಾಗಲಿದೆ.
ಕರ್ನಾಟಕ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಸೌರಾಷ್ಟ್ರ, ಒಡಿಶಾ, ಮಹಾರಾಷ್ಟ್ರ, ದೆಹಲಿ, ವಿದರ್ಭ, ಅಸ್ಸಾಂ ಜಾರ್ಖಂಡ್, ರಾಜಸ್ತಾನ ಕೂಡ ‘ಬಿ’ ಗುಂಪಿನಲ್ಲಿವೆ. ‘ಎ’ ಗುಂಪಿನಲ್ಲಿ ಮುಂಬೈ, ಪಂಜಾಬ್, ಮಧ್ಯಪ್ರದೇಶ, ಬಂಗಾಳ, ಬರೋಡ, ಗುಜರಾತ್, ತಮಿಳುನಾಡು, ಉತ್ತರ ಪ್ರದೇಶ ಮತ್ತು ರೈಲ್ವೇಸ್ ತಂಡಗಳಿವೆ. ‘ಸಿ’ ಗುಂಪಿನಲ್ಲಿ ಹೈದರಾಬಾದ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ತ್ರಿಪುರ, ಸರ್ವಿಸಸ್, ಆಂಧ್ರ, ಗೋವಾ, ಛತ್ತೀಸ್ ಗಢ, ಕೇರಳ ತಂಡಗಳಿವೆ.
‘ಎ’ ಮತ್ತು ‘ಬಿ’ ಗುಂಪಿನಲ್ಲಿ ತಲಾ 9 ತಂಡಗಳಿದ್ದು, ಅಂಕ ಗಳಿಕೆಯಲ್ಲಿ ಮೊದಲ 3 ಸ್ಥಾನ ಪಡೆಯುವ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿವೆ. ‘ಸಿ’ ಗುಂಪಿನಲ್ಲಿ 10 ತಂಡಗಳಿದ್ದು, 2 ತಂಡಗಳು ಕ್ವಾರ್ಟರ್ ಫೈನಲ್ ಆಡುವ ಅವಕಾಶ ಪಡೆಯಲಿವೆ. ಡಿಸೆಂಬರ್ 27 ರಿಂದ 31 ರವರೆಗೆ ಸೆಮಿಫೈನಲ್, ಜನವರಿ 7 ರಿಂದ ಫೈನಲ್ ಪಂದ್ಯ ನಡೆಯಲಿವೆ.