ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಹೆಡಮುರಿ ಕಟ್ಟಲು ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಪೂರ್ವ ತಯಾರಿ ನಡೆಸಿದ್ದು, ಈ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲಾಗಿದೆ.
ಭಾರತದಿಂದ ತಲೆ ಮರೆಸಿಕೊಂಡಿರುವ ದಾವೂದ್ ಇಬ್ರಾಹಿಂ, ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಹಲವು ದೇಶಗಳಲ್ಲಿ ತನ್ನ ವ್ಯವಹಾರ ನಿಯಂತ್ರಿಸುತ್ತಾನೆ. ಇಂಧನ, ರಿಯಲ್ ಎಸ್ಟೇಟ್ ಮೊದಲಾದ 7 ದಂಧೆಗಳಲ್ಲಿ ತೊಡಗಿರುವ ಆತನ ಆಪ್ತ ವಲಯದಲ್ಲಿ 11 ಮಂದಿ ಇದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಇವುಗಳ ಬಗ್ಗೆ ತನಿಖೆ ನಡೆಸಲು 50 ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ.
ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ರಾ, ಇಂಟರ್ ಪೋಲ್ ವಿಂಗ್ ನಿಂದ ಆಯ್ದ 50 ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಲಾಗಿದೆ. ಈ ತಂಡ ಪಾಕಿಸ್ತಾನ, ದುಬೈನಲ್ಲಿ ದಾವೂದ್ ಗ್ಯಾಂಗ್ ಚಲನವಲನಗಳ ಮೇಲೆ ನಿಗಾ ವಹಿಸಿ, ದಾವೂದ್ ನನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಿದೆ ಎಂದು ಹೇಳಲಾಗಿದೆ.