ಧೂಮಪಾನ ನಿಷೇಧವಿದ್ದರೂ ಅಲ್ಲಿಗೆ ಸಿಗರೇಟ್ ಸೇದಿಕೊಂಡು ಬಂದ ಯುವತಿಯೊಬ್ಬಳು ಇದಕ್ಕಾಗಿ ತನ್ನನ್ನು ಹೊರ ಹಾಕಿದ ಸೆಕ್ಯುರಿಟಿ ಗಾರ್ಡ್ ಗೆ ಪಾಠ ಕಲಿಸಲು ಟಾಪ್ ಲೆಸ್ ಆಗಿ ಇದೀಗ ಕಾನೂನು ಸಂಕಷ್ಟ ಎದುರಿಸುವ ಭೀತಿಯನ್ನೆದುರಿಸುತ್ತಿದ್ದಾಳೆ.
ಖಜಕ್ ಸ್ತಾನದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಬೆಟ್ಟಿಂಗ್ ಶಾಪ್ ಗೆ ಯುವತಿಯೊಬ್ಬಳು ಬಂದಿದ್ದಾಳೆ. ಕೈಯ್ಯಲ್ಲಿ ಸಿಗರೇಟು ಹಿಡಿದೇ ಒಳ ಪ್ರವೇಶಿಸುತ್ತಿದ್ದ ಆಕೆಗೆ ಸೆಕ್ಯುರಿಟಿ ಗಾರ್ಡ್ ಧೂಮಪಾನ ಮಾಡದಂತೆ ಸೂಚಿಸಿದರೂ ಕೇರ್ ಮಾಡಿಲ್ಲ.
ಯುವತಿಯ ಹಿಂದೆಯೇ ಬಂದ ಸೆಕ್ಯುರಿಟಿ ಗಾರ್ಡ್, ಆಕೆಯನ್ನು ಬಲವಂತದಿಂದ ಹೊತ್ತೊಯ್ದು ಹೊರ ಹಾಕಿದ್ದಾನೆ. ಕೆಲ ಹೊತ್ತಿನ ಬಳಿಕ ಯುವತಿ ಮತ್ತೆ ಅಲ್ಲಿಗೆ ಬಂದಿದ್ದಾಳೆ. ನೋಡನೋಡುತ್ತಿದ್ದಂತೆಯೇ ತನ್ನ ಮೇಲುಡುಗೆಯನ್ನು ಕಳಚಿ ತನ್ನ ಹಿಂದೆ ಬಿದ್ದಿದ್ದ ಸೆಕ್ಯುರಿಟಿ ಗಾರ್ಡ್ ಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೂರು ದಾಖಲಿಸುವುದಾಗಿ ಬೆದರಿಸಿದ್ದಾಳೆ. ಆದರೆ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ದೂರು ನೀಡುವ ಬೆದರಿಕೆ ಹಾಕಿದವಳೇ ಈಗ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.