Quantcast
Channel: Latest News | Kannada Dunia | Kannada News | Karnataka News | India News
Viewing all articles
Browse latest Browse all 103032

ಭಾರತಕ್ಕೆ ಬರಲಿದೆ ನಿಸ್ಸಾನ್ ಸ್ಪೋರ್ಟ್ಸ್ ಕಾರು

$
0
0
ಭಾರತಕ್ಕೆ ಬರಲಿದೆ ನಿಸ್ಸಾನ್ ಸ್ಪೋರ್ಟ್ಸ್ ಕಾರು

ಜಪಾನ್ ಮೂಲದ ನಿಸ್ಸಾನ್ ಕಂಪನಿ ತನ್ನ ಇತ್ತೀಚಿನ ಸ್ಪೋರ್ಟ್ ಕಾರಾದ ಜಿಟಿ-ಆರ್ ನ ಪ್ರೀ ಬುಕಿಂಗ್ ಅನ್ನು ಭಾರತದಲ್ಲಿ ಆರಂಭಿಸಿರುವುದಾಗಿ ಹೇಳಿದೆ.

ಕಳೆದ ಮಾರ್ಚ್ ನಲ್ಲಿ ನ್ಯೂಯಾರ್ಕ್ ನ ಅಂತರಾಷ್ಟ್ರೀಯ ಆಟೋ ಪ್ರದರ್ಶನವೊಂದರಲ್ಲಿ ಜಿಟಿ-ಆರ್ ಸ್ಪೋರ್ಟ್ಸ್ ಕಾರಿನ ಅನಾವರಣ ಮಾಡಲಾಗಿತ್ತು. 2016 ರ ಅಂತ್ಯದಲ್ಲಿ ಇದು ಭಾರತದಲ್ಲಿ ಲಭ್ಯವಾಗುತ್ತದೆ ಎನ್ನಲಾಗಿದೆ. ಆಸಕ್ತ ಗ್ರಾಹಕರು ಮುಂಗಡವಾಗಿ 25 ಲಕ್ಷ ರೂ. ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಿಕೊಳ್ಳಬಹುದೆಂದು ಭಾರತ ನಿಸ್ಸಾನ್ ಮೋಟಾರ್ಸ್ ಹೇಳಿದೆ.

ನಿಸ್ಸಾನ್ ಜಿಟಿ-ಆರ್ 3.8 ಲೀಟರ್ ಸಾಮರ್ಥ್ಯದ V6 ಅವಳಿ ಟರ್ಬೋಜೆಟ್ ಇಂಜಿನ್ ಹೊಂದಿದೆ. ಇದು 3 ಸೆಕೆಂಡ್ ಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕಾರನ್ನು 0-100 kmph ನಷ್ಟು ಮುಂದೂಡುತ್ತದೆ. 2017 ರಲ್ಲಿ ಗ್ರಾಹಕರನ್ನು ತಲುಪುವ ನಿಸ್ಸಾನ್ ಜಿಟಿ-ಆರ್ ನಲ್ಲಿ ಗಮನಾರ್ಹ ಬದಲಾವಣೆಗಳು ಗ್ರಾಹಕರನ್ನು ಆಕರ್ಷಿಸಲಿವೆ ಎನ್ನಲಾಗಿದೆ.


Viewing all articles
Browse latest Browse all 103032

Trending Articles



<script src="https://jsc.adskeeper.com/r/s/rssing.com.1596347.js" async> </script>